ಸ್ಕೂಟರ್‍ಗೆ ಟ್ಯಾಂಕರ್ ಢಿಕ್ಕಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತ್ಯು
ಕಾಪು ಕಡೆಯಿಂದ ಬರುತ್ತಿದ್ದ ಸ್ಕೂಟರ್ ಗೆ ಹಿಂದಿನಿಂದ ಬಂದ ಟ್ಯಾಂಕರ್ ಡಿಕ್ಜಿಯಾದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉದ್ಯಾವರ ಸೇತುವೆ ಮೇಲೆ ನಡೆದಿದೆ. ಸ್ಕೂಟರ್ ಸವಾರ ಮಲ್ಲಾರು ಕೋಟೆ ರೋಡ್ ನಿವಾಸಿ ಜಾಫರ್ ಎಂಬವರ ಪುತ್ರ ಕಟಪಾಡಿ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕ ಅಲ್ಪಾಜ್ (17). ಈತ ತನ್ನ ಸಹಪಾಠಿಯೊಂದಿಗೆ ಉಡುಪಿ ಕಡೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅಪಘಾತ ವೇಳೆ ಹಿಂಬದಿ ಸವಾರ ಸ್ಕೂಟರಿಂದ ಹಾರಿದರೆ, ಸವಾರ ರಸ್ತೆಗೆ ಬಿದ್ದಿದ್ದು ಟ್ಯಾಂಕರ್ ಆತನ ಮೇಲೆ ಚಲಿಸಿ ಸ್ಥಳದಲ್ಲಿ ನಿಲ್ಲದೆ ಪರಾರಿಯಾಗಿದೆ.