ಉಡುಪಿ ನಗರದೊಳಗೆ ಸಂಚರಿಸುವ ಆಟೋ ಚಾಲಕರ ಸಮಸ್ಯೆ ಬಗೆ ಹರಿಸದಿದ್ದರೆ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಉಡುಪಿ ಶಾಸಕ ರಘುಪತಿ ಭಟ್ ವಿರುದ್ದ ಅಟೋ ಚಾಲಕರು ತಿರುಗಿ ಬಿದ್ದಿದ್ದಾರೆ. ನಗರದ ಒಳಗಡೆ ಓಡಾಡುವ ಅಟೋಚಾಲಕರ ಮಧ್ಯೆ ಬಿರುಕು ಮೂಡಿಸಿ, ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎನ್ನುವ ಅರೋಪಗಳನ್ನು ಅಟೋ ಚಾಲಕರು ಮಾಡಿದ್ದಾರೆ.ಅಷ್ಟೇ ಅಲ್ಲ ನಗರದೊಳಗಡೆ ಸಂಚರಿಸುವ ಅಟೋ ಚಾಲಕರ ಸಮಸ್ಯೆಗಳನ್ನು ಬಗೆ ಹರಿಸದಿದ್ದಲ್ಲಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆಯನ್ನು ಕೂಡ ಅಟೊ ಚಾಲಕರು ನೀಡಿದ್ದಾರೆ.
ನಿಯಮದಂತೆ ನಗರದಲ್ಲಿ ಸಂಚರಿಸುವ ಅಟೋಗಳು ರೋಟೆಶನ್ ಮಾದರಿಯಲ್ಲಿ ಅಟೋ ನಿಲ್ದಾಣದಲ್ಲಿ ಬಾಡಿಗೆ ಮಾಡುವ ಅವಕಾಶ ಇದೆ.ಅದ್ರೆ ಕೆಲವೊಂದು ಅಟೋ ನಿಲ್ದಾಣಗಳಲ್ಲಿ ಇದಕ್ಕೆ ಅವಕಾಶ ನೀಡುತ್ತಿಲ್ಲ.ಇದನ್ನ ಶಾಸಕರ ಬಳಿ ಹೇಳಿಕೊಂಡರೆ ತನ್ನದೇ ಆದ ಸಂಘವನ್ನು ಕಟ್ಟಿ ಕೊಂಡು ,ಇತರ ಅಟೋ ಚಾಲಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಅಟೋ ಚಾಲಕರು ಅರೋಪಿಸಿದ್ದಾರೆ. ಅಟೋ ರಿಕ್ಷಾವನ್ನೇ ನಂಬಿ ಬದುಕುತ್ತಿರುವವರಿಗೆ ತುಂಬಾನೇ ಸಮಸ್ಯೆ ಉಂಟಾಗಿದೆ.ಇದನ್ನು ಉಡುಪಿ ಶಾಸಕರು ಸರಿ ಪಡಿಸಬೇಕು.ಇಲ್ಲವಾದಲ್ಲಿ ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಅಕ್ರೋಶ ವ್ಯಕ್ತ ಪಡಿಸಿದ್ದಾರೆ.