ಸರಕಾರ ಖಾಸಗಿ ಬಸ್ ಗಳ ವೆಚ್ಚ ಭರಿಸಿದ್ರೆ ಖಾಸಗಿ ಬಸ್ ನಲ್ಲೂ ಉಚಿತ ಪ್ರಯಾಣ : ಉಡುಪಿ ಸಿಟಿ ಬಸ್ ಮಾಲಕರ ಸಂಘ

ಉಡುಪಿ : ರಾಜ್ಯದಾದ್ಯಂತ ಕಾಂಗ್ರೆಸ್ ನ ಭರವಸೆ ನೀಡಿದ ಗ್ಯಾರಂಟಿ ಗಳು ಒಂದೊಂದೆ ಜಾರಿ ಆಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ನಿನ್ನೆಯಷ್ಟೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ರಾಜ್ಯದಾದ್ಯಂತ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡಿದ್ದರು. ಆದರೆ ರಾಜ್ಯದಲ್ಲಿ ಸರಕಾರಿ ಬಸ್ ಮಾತ್ರ ಅಲ್ಲ, ಖಾಸಗಿ ಬಸ್ ಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ಮಾಡುತ್ತಿವೆ. ಇಲ್ಲಿ ಮಹಿಳೆಯರಿಗೆ ಸಮಸ್ಯೆ ಅಗುವ ಸಾದ್ಯತೆ ಇದೆ. ರಾಜ್ಯದಾದ್ಯಂತ 17 ಜಿಲ್ಲೆಗಳಲ್ಲಿ ಖಾಸಗಿ ಬಸ್ ಓಡಾಟ ನಡೆಸುತ್ತಿದ್ದು ಸರಕಾರ ಇಲ್ಲಿ ಸಹ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಟ್ವೀಟ್ ಮುಖಾಂತರ ಆಗ್ರಹ ಮಾಡಿದ್ದರು, ಇದೀಗ ಸಿಟಿ ಬಸ್ ಮಾಲಕರ ಒಕ್ಕೂಟವು ನಿರ್ಣಯವೊಂದನ್ನು ಮಾಡಿದ್ದು, ರಾಜ್ಯದಾದ್ಯಂತ ಸರಕಾರಿ ಬಸ್ ಗಳಲ್ಲಿ ಮಹಿಳೆರಿಗೆ ಉಚಿತ ಪ್ರಯಾಣವೆಂದು ಸರಕಾರ ಘೋಷಿಸಿದೆ. ಆದ್ರೆ 17 ಜಿಲ್ಲೆಗಳಲ್ಲಿ ಖಾಸಗಿ ಬಸ್ ಗಳು ಓಡಾಟ ಮಾಡುತ್ತಿವೆ. ಈ ಜಿಲ್ಲೆಗಳಲ್ಲಿ ಮಹಿಳೆಯರಿಗೆ ಅನ್ಯಾಯ ಆಗೋದು ಗ್ಯಾರಂಟಿ. ಆದ್ದರಿಂದ ಸರಕಾರ ಖಾಸಗೀ ಬಸ್ ಗಳ ವೆಚ್ಚ ಭರಿಸಿದ್ರೆ ಖಾಸಗಿ ಬಸ್ ನಲ್ಲೂ ಉಚಿತ ಪ್ರಯಾಣದ ಗ್ಯಾರಂಟಿ ಪಡೆಯಬಹುದು ಎಂದು ಸಿಟಿಬಸ್ ಮಾಲಕರ ಸಂಘ ತಿಳಿಸಿದೆ.


ಈ ಬಗ್ಗೆ ಮಾತನಾಡಿದ ಸಿಟಿಬಸ್ ಮಾಲಕರ ಒಕ್ಕೂಟದ ಅದ್ಯಕ್ಷ ಹಾಗೂ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣ ನೀಡಲು ಸಾದ್ಯವಿದೆ. ಆದರೆ ಸರಕಾರಿ ಬಸ್ ಗಳ ವೆಚ್ಚ ಭರಿಸಿದಂತೆ ಖಾಸಗಿ ಬಸ್ ಗಳ ವೆಚ್ಚ ಸಹ ಸರಕಾರ ಭರಿಸಬೇಕು. ಇಲ್ಲವಾದರೆ ಡೀಸೆಲ್ ಸಬ್ಸಿಡಿ, ಬಸ್ ಪಾಸ್ ಅಥವಾ ಇತರ ಮೂಲಗಳಿಂದ ವೆಚ್ಚ ಭರಿಸಿದರೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣ ಸಾದ್ಯವಿದ್ದು, ಈ ಬಗ್ಗೆ ಸರಕಾರ ಗಮನ ಹರಿಸಬೇಕು. ಕರಾವಳಿ ಭಾಗದಲ್ಲಿ ಬಹುತೇಕ ಮಂದಿ ಖಾಸಗಿ ಬಸ್ ಗಳಲ್ಲಿ ಸಂಚಾರ ಮಾಡುತ್ತಿದ್ದಾರೆ ಎಂದು ಮಾಧ್ಯಮದವರಿಗೆ ತಿಳಿಸಿದರು.

Related Posts

Leave a Reply

Your email address will not be published.