ವಿಶ್ವ ಪಾರ್ಶ್ವವಾಯು ದಿನದ ಪ್ರಯುಕ್ತ ಜಾಗೃತಿ: ಮಲ್ಪೆಯಲ್ಲಿ ಮರಳು ಕಲಾ ಶಿಲ್ಪ ಅನಾವರಣ

ವಿಶ್ವದಾದ್ಯಂತ ಪಾರ್ಶ್ವವಾಯು ಸಂಭವವನ್ನು ಕಡಿಮೆ ಮಾಡಲು ಪ್ರತಿ ವರ್ಷ ಅಕ್ಟೋಬರ್ 29 ರಂದು ವಿಶ್ವ ಪಾರ್ಶ್ವವಾಯು ದಿನವನ್ನು ಆಚರಿಸಲಾಗುತ್ತದೆ. ಇದರ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ  ಮತ್ತು ಆಸ್ಪತ್ರೆಯ ನರವಿಜ್ಞಾನ ವಿಭಾಗವು ಮಲ್ಪೆ ಕಡಲ ತೀರದಲ್ಲಿ ಪಾರ್ಶ್ವವಾಯು ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಮರಳು ಕಲಾ ಶಿಲ್ಪವನ್ನು ಅನಾವರಣಗೊಳಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿತು.  ಕೆಎಂಸಿ ಮಣಿಪಾಲದ ಡೀನ್ ಡಾ ಶರತ್ ಕೆ ರಾವ್ ಅವರು ಮರಳು ಕಲಾ ಶಿಲ್ಪವನ್ನು ಅನಾವರಣಗೊಳಿಸಿ ಮಾತನಾಡುತ್ತಾ, “ಪಾರ್ಶ್ವವಾಯು ಅಂದರೆ ಮೆದುಳಿನ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿ ಭಾಗವು ನಿಷ್ಕ್ರಿಯಗೊಳ್ಳುತ್ತದೆ. ಇದರಿಂದ ಶೇಕಡಾ 33 ರಷ್ಟು ಜನ ಸಾವನ್ನಪ್ಪುತ್ತಾರೆ ಹಾಗು ಇನ್ನೂ ಶೇಕಡಾ 33 ರಷ್ಟು ಜನ ಶಾಶ್ವತ ಅಂಗನ್ಯೂನತೆ ಹೊಂದುತ್ತಾರೆ. ಇದನ್ನು ನಿಯಂತ್ರಿಸಲು ಸಮತೋಲನ ಆಹಾರ ಹಾಗು ವ್ಯಾಯಾಮವು ಅವಶ್ಯ.”

ಸಾರ್ವಜನಿಕ ಜಾಗೃತಿ ಕಾರ್ಯಕ್ರಮದ ಮೂಲಕ ರೋಗಲಕ್ಷಣಗಳು ಕಂಡ 4.5 ಗಂಟೆಗಳ ಒಳಗೆ ಆಸ್ಪತ್ರೆಗೆ ಬಂದರೆ ಸಂಪೂರ್ಣ ಗುಣಮುಖರಾಗುವ ಸಾಧ್ಯತೆ ಹೆಚ್ಚಿದೆ ಎಂಬ ಅರಿವನ್ನು ಮೂಡಿಸುವ ಉದ್ದೇಶವಾಗಿದೆ. ವಿಶ್ವ ಪಾರ್ಶ್ವವಾಯು ದಿನವು, ಇದರಿಂದಾಗುವ ಗಂಭೀರ ಸ್ವರೂಪ ಮತ್ತು  ಪಾರ್ಶ್ವವಾಯುವಿನ ಬಗ್ಗೆ ಜಾಗೃತಿ ಮೂಡಿಸಲು  ಮತ್ತು ಪಾರ್ಶ್ವವಾಯುವಿನ ಅಪಾಯದ ಅಂಶಗಳು ಮತ್ತು ಚಿಹ್ನೆಗಳ ಬಗ್ಗೆ ಉತ್ತಮ ಸಾರ್ವಜನಿಕ ಅರಿವಿನ ಮೂಲಕ ಪಾರ್ಶ್ವವಾಯುವಿನ ಹೊರೆಯನ್ನು ಕಡಿಮೆ ಮಾಡುವ ವಿಧಾನಗಳ ಕುರಿತು ಮಾತನಾಡಲು ಉತ್ತಮ ಅವಕಾಶವನ್ನು ಕಲ್ಪಿಸಿದ ಅದ್ಭುತ ಕಾರ್ಯಕ್ರಮ ಇದಾಗಿದೆ.

ಸಂದರ್ಭದಲ್ಲಿ ಮಾಹೆ ಮಣಿಪಾಲದ  ಬೋಧನಾ ಆಸ್ಪತ್ರೆಗಳು ಇದರ ಮುಖ್ಯ ನಿರ್ವಹಣಾಧಿಕಾರಿಯಾದ ಡಾ. ಆನಂದ್ ವೇಣುಗೋಪಾಲ್, ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ, ನರವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಅಪರ್ಣಾ ಆರ್. ಪೈ, ನರಶಾಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಗಿರೀಶ್ ಮೆನನ್ ಆರ್ ಮತ್ತು ಸಿಬ್ಬಂದಿಗಳು  ಉಪಸ್ಥಿತರಿದ್ದರು. ಡಾ. ಅಪರ್ಣಾ ಆರ್ ಪೈ ಆರ್ ಸ್ವಾಗತಿಸಿದರು, ಡಾ. ಗಿರೀಶ್ ಮೆನನ್ ಆರ್ ಅವರು ಪಾರ್ಶ್ವವಾಯು ಆರೋಗ್ಯ ಮತ್ತು ಪಾರ್ಶ್ವವಾಯು  ದಿನದ ಕುರಿತು ಅವಲೋಕನವನ್ನು ನೀಡಿದರು ಮತ್ತು ಡಾ. ಶ್ರೀಪದ್ಮ ವಿ ಕಾರ್ಯಕ್ರಮ ನಿರೂಪಿಸಿದರು.

 ವರದಿ: ಉಡುಪಿ

Related Posts

Leave a Reply

Your email address will not be published.