ಉಡುಪಿ : ನೂತನ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿರಾಂ ಶಂಕರ್ ರವರಿಗೆ ಕರ್ನಾಟಕ ಪತ್ರಕರ್ತರ ಸಂಘ (ರಿ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಗೌರವ

ಕರ್ನಾಟಕ ಪತ್ರಕರ್ತರ ಸಂಘ (ರಿ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯವರಾಗಿರುವ ಶ್ರೀ ಹರಿರಾಂ ಶಂಕರ್ ಅವರನ್ನು ಜಿಲ್ಲೆಗೆ ಸ್ವಾಗತಿಸುವ ಮೂಲಕ ಗೌರವಿಸಲಾಯಿತು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಯನ್ನು ಬಲಪಡಿಸಿ ಶಾಂತಿ ಕಾಪಾಡುವಂತೆ, ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಬೇಕೆಂದು ಕರ್ನಾಟಕ ಪತ್ರಕರ್ತರ ಸಂಘ ದ ವತಿಯಿಂದ ವಿನಂತಿಸಲಾಯಿತು.
ಕರ್ನಾಟಕ ಪತ್ರಕರ್ತರ ಸಂಘ ದ ಜಿಲ್ಲಾಧ್ಯಕ್ಷರಾದ ಕಿರಣ್ ಪೂಜಾರಿ, ಪ್ರಕಾಶ್.ಕೆ.ಪೂಜಾರಿ, ಮಹೇಶ್ ಕುಮಾರ್, ಜನಾರ್ಧನ ಕೆ.ಎಮ್ ಮತ್ತಿತರರು ಉಪಸ್ಥಿತರಿದ್ದರು.
