ಉಡುಪಿ: ಉಪತಹಸೀಲ್ದಾರ್ ಅಶ್ವಥ್ ಪಡುಬಿದ್ರಿ ನಿಧನ
ಉಡುಪಿ: ಉಡುಪಿ ತಾಲೂಕು ಕಚೇರಿಯಲ್ಲಿ ಉಪತಹಸೀಲ್ದಾರ್ ಅಶ್ವಥ್ ಪಡುಬಿದ್ರಿ(41) ಅಲ್ಪಕಾಲದ ಅಸೌಖ್ಯದಿಂದ ಇಂದು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು.
ಇವರು ಕುಂದಾಪುರ, ಶೃಂಗೇರಿ, ಉಡುಪಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಅವಿವಾಹಿತರಾಗಿರುವ ಇವರು, ಇಬ್ಬರು ಸಹೋದರಿ, ತಾಯಿ, ಅಜ್ಜಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.