ನನಗೆ ಗೆಲುವಿನೊಂದಿಗೆ ವಿದಾಯ ಹೇಳಿ ಸೋಲಿನೊಂದಿಗೆ ಬೇಡ : ವಿನಯಕುಮಾರ್ ಸೊರಕೆ

ನನ್ನ ಕೊನೆಯ ಚುನಾವಣೆ ಇದಾಗಿದ್ದು, ಕ್ಷೇತ್ರದ ಜನತೆ ನನಗೆ ಗೆಲುವಿನ ವಿದಾಯ ಹೇಳಿ.. ಸೋಲಿನೊಂದಿಗೆ ಬೇಡ ಎಂಬುದಾಗಿ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ.
ಕಾಪುವಿನಲ್ಲಿ ಅವರು ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಚುನಾವಣೆಯೆ ನಾನು ನನ್ನ ಅಂತಿಮ ಚುನಾವಣೆ ಎಂದಿದ್ದೆ. ಆದರೆ ನಮ್ಮ ಅತೀಯಾದ ಆತ್ಮವಿಶ್ವಾಸ ನಮಗೆ ಮುಳುವಾಗಿ ನಾನು ಸೋಲು ಕಂಡಿದ್ದೆ. ಸೊಲು ಕಂಡರೂ ನಾನು ಎಲ್ಲೊ ದೂರದ ಬೆಂಗಳೂರಿನಲ್ಲಿ ಕುಳಿತಿಲ್ಲ ಬದಲಾಗಿ ನಮ್ಮ ಕಾರ್ಯಕರ್ತರೊಂದಿಗೆ ಸುತ್ತಾಡಿ ಅವರ ನಿಕಟ ಸಂಪರ್ಕದಲ್ಲಿದ್ದೆ. ಇದೀಗ ನಮ್ಮ ಪಕ್ಷದ ಹಿರಿಯ ಕಿರಿಯ ಕಾರ್ಯಕರ್ತರ ಮುಖಂಡರ ಒತ್ತಾಸೆಯಿಂದಾಗಿ ನನಗೆ ಪಕ್ಷ ಮತ್ತೊಮ್ಮೆ ಅಂತಿಮ ಅವಕಾಶ ಮಾಡಿಕೊಟ್ಟಿದೆ. ಪಕ್ಷ ನನಗೆ ನೀಡಿದ ಅವಕಾಶವನ್ನು ಕ್ಷೇತ್ರದ ಜನತೆ ಸಾಕರಗೊಳಿಸುವ ಮೂಲಕ ಮತ್ತೆ ನಿಮ್ಮ ಸೇವೆಯನ್ನು ಮಾಡುವ ಅವಕಾಶ ಮಾಡಿಕೊಡ ಬೇಕಾಗಿದ್ದು, ನನ್ನ ಈ ಅಂತಿಮ ಚುನಾವಣೆಯಲ್ಲಿ ನನಗೆ ಗೆಲುವಿನ ವಿದಾಯ ಹೇಳಿ ಸೋಲಿನಿಂದ ಬೇಡ ಎಂಬುದಾಗಿ ಮನವಿ ಮಾಡಿದ್ದಾರೆ.
