ಉಡುಪಿ: ನೇತ್ರಜ್ಯೋತಿ ಕಾಲೇಜಿನಲ್ಲಿ ವಿಶ್ವಪರಿಸರ ದಿನಾಚರಣೆ

ಉಡುಪಿಯ ಪ್ರತಿಷ್ಠಿತ ನೇತ್ರಜ್ಯೋತಿ ಕಾಲೇಜಿನಲ್ಲಿ ವಿಶ್ವಪರಿಸರ ದಿನಾಚರಣೆಯನ್ನು ವಿದ್ಯಾರ್ಥಿಗಳಿಗೆ ಗಿಡ ನೀಡುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ಉಡುಪಿಯ ಉಪವಲಯ ಅರಣ್ಯಾಧಿಕಾರಿಗಳಾದ ಶ್ರೀ ಶಿವಾನಂದ ರವರು ಮಾತನಾಡಿ, ವಿಶ್ವಪರಿಸರ ದಿನಾಚರಣೆಯ ಉದ್ದೇಶ, ಪರಿಸರ ರಕ್ಷಣೆ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ತಿಳಿಸಿದರು. ಇನ್ನೊರ್ವ ಅತಿಥಿ ಶ್ರೀ ದೇವರಾಜ್ ಪಣ ಬೀಟ್ ಫಾರೆಸ್ಟರ್ ಉಡುಪಿ ಇವರು ಮಾತನಾಡಿ ಪ್ರತಿಯೊಬ್ಬರು ತಮ್ಮ ಹುಟ್ಟಿದ ದಿನವನ್ನು ಒಂದು ಸಸಿ ನೆಡುವುದರ ಮೂಲಕ ಆಚರಿಸಬೇಕು. ಆ ಮೂಲಕ ಪರಿಸರ ರಕ್ಷಣೆಯ ಕಾರ್ಯವನ್ನು ಕೈಗೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಶ್ಮಿ ಕೃಷ್ಣಪ್ರಸಾದ್ ರವರು ಪರಿಸರ ದಿನಾಚರಣೆಯ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಬಾರದು ಪರಿಸರ ರಕ್ಷಣೆಗಾಗಿ ಪ್ರತಿಯೊಬ್ಬರು ತಿಂಗಳಿಗೊಂದು ಗಿಡವನ್ನು ನೆಡಬೇಕು, ಆ ಮೂಲಕ ನಮ್ಮ ಪರಿಸರವನ್ನು ನಾವೇ ಕಾಪಾಡಬೇಕು ಎಂದರು.

ವೇದಿಕೆಯಲ್ಲಿ ಕಾಲೇಜಿನ ಸಿ.ಒ.ಒ ಡಾ| ಗೌರಿ ಪ್ರಭು, ಕಾಲೇಜಿನ ಕಾರ್ಡಿನೇಟರ್ ಗಳಾದ ಶ್ರೀ ಮಾಧವ ಪೂಜಾರಿ, ಶ್ರೀ ಸಚಿನ್ ಶೇಟ್, ಶ್ರೀ ನಾಗರಾಜ್ ಮೆಂಡನ್, ಎಚ್.ಆರ್ ತಾರಾ ಶಶಿಧರ್ ಉಪಸ್ಥಿತರಿದ್ದರು, ಮೊದಲಿಗೆ ವಿದ್ಯಾರ್ಥಿ ಸೃಜನ್ ರವರು ಸ್ವಾಗತಿಸಿದರೆ, ಕು| ಯಶಸ್ವಿನಿ ವಂದಿಸಿದರು. ಕು| ಶ್ರದ್ಧಾ ಕಾರ್ಯಕ್ರಮ ನಿರೂಪಿಸಿದರು. ನಂತರ ಎಲ್ಲಾ ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು.
