ಉದ್ಯಾವರದಲ್ಲಿ ಅಂಡರ್ ಪಾಸ್ ಬೇಡಿಕೆಗಾಗಿ ಪ್ರತಿಭಟನೆ : 11ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ
ಮಂಜೇಶ್ವರ: ಉದ್ಯಾವರದಲ್ಲಿ ಅಂಡರ್ ಪಾಸ್ ಬೇಡಿಕೆಗಾಗಿ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ 11 ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟ ಸಮಿತಿಯ ನೇತಾರ ಸಂಜೀವ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ 11 ನೇ ದಿನದ ಧರಣಿ ಸತ್ಯಾಗ್ರಹವನ್ನು ಉದ್ಯಾವರ ಶ್ರೀ ಅರಸು ಮಂಜಿಷ್ಟಾರ್ ಕ್ಷೇತ್ರದ ಪಾತ್ರಿ ರಾಜ ಬೆಲ್ಚಾಡ ರವರು ಉದ್ಘಾಟಿಸಿದರು.
ಈ ಸಂದರ್ಭ ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯ ಕುಟುಂಬ ಶ್ರೀ ಸದಸ್ಯರು ಧರಣಿಯಲ್ಲಿ ಕುಳಿತು ತಮ್ಮ ಬೆಂಬಲವನ್ನು ಸೂಚಿಸಿದರು.ಕುಂಜತ್ತೂರಿನಲ್ಲಿ ಸತ್ಯಾಗ್ರಹ ನಡೆಸಿ 5 ದಿನದೊಳಗೆ ಅಂಡರ್ ಪಾಸ್ ಗೆ ಹಸಿರು ನಿಶಾನೆ ತೋರಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉದ್ಯಾವರದ ಅಂಡರ್ ಪಾಸ್ ಗಾಗಿ 11 ದಿನ ಕಳೆದರೂ ಯಾವೊಂದು ಪ್ರತಿಕ್ರಿಯೆಯನ್ನು ಕೂಡಾ ನೀಡದೇ ಇರುವುದು ಸ್ಥಳೀಯರಲ್ಲಿ ಆಕ್ರೋಶ ಹೆಚ್ಚಿಸಿದೆ.
ಹೋರಾಟ ಸಮಿತಿ ನೇತಾರರಾದ ದಯಾಕರ್ ಮಾಡ, ಜಬ್ಬಾರ್ ಪದವು, ಹಸೈನಾರ್, ಹನೀಫ್ ಕುಚ್ಚಿಕ್ಕಾಡ್, ರಹ್ಮತ್ ಮೊದಲಾದವರು ನೇತೃತ್ವ ನೀಡಿದರು. ಕುಟುಂಬ ಶ್ರೀ ಅಧ್ಯಕ್ಷೆ ಜಯಶ್ರೀ, ವಾರ್ಡ್ ಸದಸ್ಯೆ ಕುಲ್ಸುಮ್ಮ, ಸೌದಿ ಕೆ ಎಂ ಸಿ ಸಿ ನೇತಾರ ಬಾಬಾ ತೂಮಿನಾಡು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.