ಉಳ್ಳಾಲ: ಉಳ್ಳಾಲ ಖಾಝಿ ಆಗಿ ಸೇವೆಯಲ್ಲಿದ್ದ ಫಝಲ್ ಕೋಯಮ್ಮ ತಂಙಳ್ ವಿಧಿವಶ

ಉಳ್ಳಾಲ: ಉಳ್ಳಾಲ ಖಾಝಿ ಆಗಿ ಸೇವೆಯಲ್ಲಿದ್ದ ಫಝಲ್ ಕೋಯಮ್ಮ ತಂಙಳ್ (65) ಎಟ್ಟಿಕುಳದಲ್ಲಿ ಸೋಮವಾರ ವಿಧಿವಶರಾದರು.
ಅವರ ತಂದೆ ಮರ್ಹೂಂ ತಾಜುಲ್ ಉಲಮಾ ಅವರು ಉಳ್ಳಾಲ ಖಾಝಿ ಸಯ್ಯದ್ ಅಬ್ದುಲ್ ರಹಿಮಾನ್ ಕುಂಞಿ ಕೋಯ ತಂಙಳ್
ಆಗಿದ್ದ ಸಂದರ್ಭದಲ್ಲಿ ಸಹಾಯಕ ಖಾಝಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2014ರಲ್ಲಿ ತಾಜುಲ್ ಉಲಮಾ ಸಯ್ಯದ್ ಅಬ್ದುಲ್ ರಹಿಮಾನ್ ಕುಂಞಿ ಕೋಯ ತಂಙಳ್ ನಿಧನ ಹೊಂದಿದ್ದು, ಇದರ ಬಳಿಕ ಫಝಲ್ ಕೋಯಮ್ಮ ತಂಙಳ್ ಖಾಝಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೇ ಕೆಲವು ವರ್ಷಗಳಿಂದ ಪುತ್ತೂರು ತಾಲೂಕಿನ ಕೂರ ಎಂಬಲ್ಲಿ ಫಝಲ್ ಎಜುಕೇಶನಲ್ ಸೆಂಟರ್ ಸಂಸ್ಥೆ ನಡಸುತ್ತಿದ್ದರು. ಅವರ ಆರೋಗ್ಯದಲ್ಲಿ ಏರು ಪೇರು ಕಂಡು ಕೇರಳದ ಆಸ್ಪತ್ರೆಗೆ ದಾಖಲಾಗಿದ್ದು, ಸೋಮವಾರ ಬೆಳಗ್ಗೆ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರ ಮೃತದೇಹ ಇಂದು ರಾತ್ರಿ 9 ಗಂಟೆಗೆ ಪುತ್ತೂರು ತಾಲೂಕಿನ ಕೂರದಲ್ಲಿ ಅಂತಿಮ ದರ್ಶನ ಹಾಗೂ ದಫನ ಕಾರ್ಯ ನಡೆಯಲಿದೆ.
ಅವರ ನಿಧನಕ್ಕೆ ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝೀಮ್ ಮುಕಚೇರಿ ಉಪಾಧ್ಯಕ್ಷ ಅಶ್ರಫ್ ರೈ ಟ್ ವೆ, ಹಸೈನಾರ್, ಕಾರ್ಯದರ್ಶಿ ಮುಸ್ತಫಾ ಮದನಿ,ನಗರ ಸಹಿತ ಸಮಿತಿ ಸದಸ್ಯರು , ಮಾಜಿ ಅಧ್ಯಕ್ಷ ರಶೀದ್ ಹಾಜಿ, ಅಬ್ದುಲ್ ರಶೀದ್ ಝೈನಿ ಸಂತಾಪ ಸೂಚಿಸಿದ್ದಾರೆ
