ನೂತನವಾಗಿ ನಿರ್ಮಾಣಗೊಂಡ ಉಳ್ಳಾಲ ತಾಲೂಕು ಕಚೇರಿ

ಉಳ್ಳಾಲ: ನೂತನವಾಗಿ ನಿರ್ಮಾಣಗೊಂಡ ಉಳ್ಳಾಲ ತಾಲೂಕು ಕಚೇರಿಯ ವಿವಿಧ ಇಲಾಖೆಗಳಿಗೆ ಸರಕಾರಿ ಕಟ್ಟಡಗಳನ್ನು ಒದಗಿಸುವ ಕುರಿತಾಗಿ ಅಧಿಕಾರಿಗಳ ಜತೆಗೆ ಚರ್ಚಿಸಲಾಗಿದೆ. ನವೆಂಬರ್ ಮೊದಲ ವಾರದಲ್ಲಿ ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಿ ತಾಲೂಕಿನಾದ್ಯಂತ ಇರುವ ಸಮಸ್ಯೆಗಳ ಚರ್ಚೆ ಹಾಗೂ ಅದರ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದ್ದಾರೆ.

ಅವರು ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿಗಳ ಯೋಜನೆಯಲ್ಲಿ ಒಂದಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಕ್ಕೆ ನಾಟೆಕಲ್ ನ ಉಳಾಲ ತಾಲೂಕು ಕಚೇರಿಯಲ್ಲಿ ಚಾಲನೆ ನೀಡಿ ಮಾತನಾಡಿದರು. ಹೊಸ ತಾಲೂಕು ಉಳ್ಳಾಲದಲ್ಲಿರುವ ಇಲಾಖೆಗಳ ಹಾಗೂ ಜನರ ಸಮಸ್ಯೆಗಳ ಅಹವಾಲುಗಳನ್ನು ಸ್ವೀಕರಿಸಲಾಗಿದೆ.ಹೊಸ ತಾಲೂಕಾಗಿರುವ ಹಿನ್ನೆಲೆಯಲ್ಲಿ ಈ ಭಾಗದ ಸಮಸ್ಯೆಗಳನ್ನು ತಿಳಿದಿದ್ದೇನೆ. ಬೇರೆ ಬೇರೆ ಇಲಾಖೆಗಳಿಗೆ ಸರಕಾರಿ ನಿವೇಶನಗಳನ್ನು ಒದಗಿಸಬೇಕಿದೆ. ಸರಕಾರಿ ಕಟ್ಟಡಗಳನ್ನು ಹೇಗೆ ತರಬಹುದು ಅನ್ನುವ ಉದ್ದೇಶದಿಂದ ಅಧಿಕಾರಿಗಳ ಜೊತೆಗೆ ಚರ್ಚಿಸಲಾಗಿದೆ ಎಂದರು.

ಈ ವೇಳೆ ತಹಶೀಲ್ದಾರ್ ಡಿ.ಎ ಪುಟ್ಟರಾಜು, ಉಪತಹಶೀಲ್ದಾರ್ ನವನೀತ್ ಮಾಳವ, ಕಂದಾಯ ನಿರೀಕ್ಷಕ ಮಂಜುನಾಥ್ ಕೆ.ಹೆಚ್, ಪ್ರಥಮ ದರ್ಜೆ ಸಹಾಯಕರಾದ ಕಿರಣ್ ಕುಮಾರ್ ಹಾಗೂ ಎಲ್ಲಾ ಗ್ರಾಮದ ಗ್ರಾಮಕರಣಿಕರು ಹಾಗೂ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

fathermuller

Related Posts

Leave a Reply

Your email address will not be published.