ಉಳ್ಳಾಲ: ಸ್ಕೂಟರ್‌ಗೆ ಲಾರಿ ಢಿಕ್ಕಿ: ಇಬ್ಬರು ಮೃತ್ಯು: ಇಬ್ಬರು ಮಕ್ಕಳಿಗೆ ಗಾಯ

ಉಳ್ಳಾಲ: ರಾ.ಹೆ. 66 ರಲ್ಲಿ ಸಂಚರಿಸುತ್ತಿದ್ದ ಸ್ಕೂಟರಿಗೆ ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಿಂದ ಹೊರಬರುತ್ತಿದ್ದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಜೆಪ್ಪು ತಂದೊಳಿಗೆ ನಿವಾಸಿ ಗಂಗಾಧರ್ (45 ಹಾಗೂ ಕೊಣಾಜೆ ಪಜೀರು ನಿವಾಸಿ ನೇತ್ರಾವತಿ(48) ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಕಲ್ಲಾಪು ಬಳಿ ಸಂಭವಿಸಿದೆ. ಸ್ಕೂಟರಿನಲ್ಲಿದ್ದ ಮೃತ ನೇತ್ರಾವತಿ ಅವರ ಮಗಳು ಮೋಕ್ಷಾ(4), ಹಾಗೂ ಅಕ್ಕನ ಮಗ ಜ್ಞಾನೇಶ್ ಗಂಭೀರ ಗಾಯಗೊಂಡಿದ್ದಾರೆ.

ಗಂಗಾಧರ್ ಅವರು ಪರಿಚಯದ ನೇತ್ರಾವತಿ ಹಾಗೂ ಇಬ್ಬರು ಮಕ್ಕಳನ್ನು ಕೊಣಾಜೆ ಕಡೆಗೆ ಕರೆತರುತ್ತಿದ್ದ ಸಂದರ್ಭ ಘಟನೆ ನಡೆದಿದೆ. ತರಕಾರಿ ಅನ್ಲೋಡ್ ಮಾಡಿ ಮಾರುಕಟ್ಟೆಯಿಂದ ಹೊರಬರುತ್ತಿದ್ದ ಲಾರಿ ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣವೆನ್ನಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.