ಉಳ್ಳಾಲ : ರಸ್ತೆ ಅವ್ಯವಸ್ಥೆ : ಕಾಂಗ್ರೆಸ್ ಚುನಾವಣಾ ಪ್ರಚಾರದ ಬ್ಯಾನರಿಗೆ ಸ್ಟಿಕ್ಕರ್ ಅಂಟಿಸಿ ವಿರೋಧ

ಉಳ್ಳಾಲ: ಕಾಂಗ್ರೆಸ್ ಚುನಾವಣಾ ಪ್ರಚಾರವಾಗಿ ಸೋಮೇಶ್ವರ ಕೊಲ್ಯ ಸಮೀಪ ಹಾಕಲಾದ ಬ್ಯಾನರಿಗೆ ಗ್ರಾಮಸ್ಥರು ಸ್ಟಿಕ್ಕರ್ ಅಂಟಿಸಿ 15 ವರ್ಷಗಳಿಂದ ಹದಗೆಟ್ಟಿರುವ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿದ್ದಾರೆ.

15 ವರ್ಷಗಳಿಂದ ಇಲ್ಲಿಯ ರಸ್ತೆ ಕಾಮಗಾರಿ ನಡೆಯದೆ ಜನರು ಕೊಳಚೆಯಲ್ಲಿಯೇ ಬದುಕಬೇಕಾಗಿದೆ. ಯಾವ ಪಕ್ಷಕ್ಕೆ ಮತ ಹಾಕಬೇಕು? ಅನ್ನುವ ಸ್ಟಿಕ್ಕರ್ ಅಂಟಿಸಲಾಗಿದೆ. ಉಳ್ಳಾಲ ಶಾಸಕ ಯು.ಟಿ ಖಾದರ್ ಭಾವಚಿತ್ರ ಹೊಂದಿರುವ ಬ್ಯಾನರ್ ಹಾಗೂ ಕಾಂಗ್ರೆಸ್ ಚುನಾವಣೆ ಭರವಸೆಗಳಿರುವ ಬ್ಯಾನರನ್ನು ಕೊಲ್ಯ ಹೆಚ್.ಪಿ ಪೆಟ್ರೋಲ್ ಪಂಪ್ ಬಳಿ ಅಳವಡಿಸಲಾಗಿದೆ. ಅದರಲ್ಲಿ ನಮ್ಮ ಶಾಸಕ ನಮ್ಮ ಹೆಮ್ಮೆ ಬರೆದಿರುವ ಅಕ್ಷರದ ಮೇಲೆ ಸ್ಟಿಕ್ಕರ್ ಅಂಟಿಸಿ ರಸ್ತೆಗೆ ಒತ್ತಾಯಿಸಲಾಗಿದೆ.
