ಮಾರ್ಚ್ 5 : ಪಿಲಾರ್ ಪಂಜಂದಾಯ ದೈವದ ನೇಮ

ಉಳ್ಳಾಲ ತಾಲೂಕಿನ ಪಿಲಾರ್ ದಾರಂದಬಾಗಿಲಿನಲ್ಲಿ ಮಾರ್ಚ್ 5 ರ ಭಾನುವಾರದಂದು ಪಂಜಂದಾಯ ದೈವದ ನೇಮ ನಡೆಲಿದೆ.
ಕುತ್ತಾರ್ ಪಂಜಂದಾಯ ಮೂಲಸಾನದಿಂದ ಶನಿವಾರ ರಾತ್ರಿ ಭಂಡಾರ ಬಂದು ಭಾನುವಾರ ಬೆಳಗ್ಗಿನಿಂದ ಮಧ್ಯಾಹ್ನ ತನಕ ಪಿಲಾರ್ ದಾರಂದಬಾಗಿಲಿನಲ್ಲಿ ನೇಮ ನಡೆಯಲಿದೆ. ಪಿಲಾರ್ ನೇಮದ ಅಂಗವಾಗಿ ಶನಿವಾರ ರಾತ್ರಿ ಪಿಲಾರ್ ಯುವಕ ಮಂಡಲವು “ಶಿವದೂತೆ ಗುಳಿಗೆ” ನಾಟಕ ಪ್ರದರ್ಶನ ಆಯೋಜಿಸಿದೆ. ಕೊರಗ ತನಿಯನಿಗೆ ನೆಲೆ ನೀಡಿದ ದೈವವಾಗಿ ಪಂಜಂದಾಯ ದೈವದ ಕಾರ್ಣಿಕವು ಜನನಿತವಾಗಿರುವಂತಹದು .