ಉಳ್ಳಾಲ : ತೀಯಾ ಪ್ರಮುಖರ ಸಮಾಲೋಚನಾ ಸಭೆ

ಭಾರತೀಯ ತೀಯಾ ಸಮಾಜ ಉಳ್ಳಾಲ ಕ್ಷೇತ್ರ ಸಮಿತಿ ನೇತೃತ್ವದಲ್ಲಿ, ತೀಯಾ ಪ್ರಮುಖರ ಸಮಾಲೋಚನಾ ಸಭೆ, ಉಚ್ಚಿಲ ಸಂಕೊಳಿಗೆ ಶ್ರೀ ಕೃಷ್ಣ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ, ರಾಜ್ಯ ವಿರೋಧ ಪಕ್ಷ ಉಪನಾಯಕ, ಯು.ಟಿ. ಖಾದರ್ ರವರಿಗೆ ತೀಯಾ ಸಮಾಜದ ವತಿಯಿಂದ, ಸಮುದಾಯ ಭವನ ಸೇರಿದಂತೆ, 3 ಪ್ರಮುಖ ಬೇಡಿಕೆಗಳನ್ನು ಪೂರೈಸುವಂತೆ ಮನವಿಯನ್ನು ನೀಡಲಾಯಿತು. ಮನವಿಗೆ ಸ್ಪಂದಿಸಿ ಮಾತನಾನಾಡಿದ ಯು. ಟಿ. ಖಾದರ್, ನಾನು ಈವತ್ತು ಶಾಸಕನಾಗಿ, ಮಂತ್ರಿಯಾಗಿ ಮುಂದುವರೆಯಬೇಕಾದರೆ ತೀಯಾ ಸಮಾಜದ ಬಹಳ ದೊಡ್ಡ ಕೊಡುಗೆ ಇದೆ, ತೀಯಾ ಸಮಾಜದಲ್ಲಿ ಎಲ್ಲಾ ರೀತಿಯ ಪ್ರತಿಭಾವಂತರಿದ್ದಾರೆ, ನೀವೇನು ಬೇಡಿಕೆ ಇಟ್ಟಿದ್ದೀರೋ ಅದನ್ನು ಆದಷ್ಟು ಪೂರೈಸುವ ಕೆಲಸ ಎಲ್ಲರೊಂದಿಗೆ ಸಮಾಲೋಚಿಸಿ ಮಾಡುವ, ಇಷ್ಟರವರೆಗೆ ಏನೇನು ಬೇಡಿಕೆ ಇಟ್ಟಿದ್ದೀರೋ, ಅದರಲ್ಲಿ ಬಹಳಷ್ಟನ್ನು ಪೂರೈಸಿದ್ದೇನೆ ಎಂಬ ವಿಶ್ವಾಸ ನನಗಿದೆ, ಈ ರಾಜ್ಯದ ಸಂಪತ್ತು, ಅದು, ಒಂದೆರಡು ಸಮುದಾಯಕ್ಕೆ ಸೀಮಿತ ಅಲ್ಲ, ಅದು ಎಲ್ಲ ಸಮುದಾಯ, ಪಂಗಡದವರಿಗೆ ಸೇರಿದ್ದು, ಹಾಗೆಯೇ ನಿಮ್ಮದೇ ಆದ ಪ್ಯಾರಾ ಮೆಡಿಕಲ್ ಕಾಲೇಜನ್ನು ಪ್ರಾರಂಬಿಸಿ, ನಾಳೆ ಕಲಿತ ನಂತರ ಎಲ್ಲಿ ಹೋದರೂ ಕೆಲಸ ಸಿಗುವಂತಾಗಬೇಕು, ನಾವು ಇಷ್ಟೆಲ್ಲಾ ಮಾಡುವುದು ನೆಮ್ಮದಿಯ ಬದಕಿಗಾಗಿ, ನೆಮ್ಮದಿಗಾಗಿ ಸೌಹಾರ್ದತೆ, ಸಹೋದರತೆ ಬೇಕಾಗಿದೆ, ಎಲ್ಲರೂ ಒಟ್ಟಾಗಿ ಹೋಗುವಂತಹ ಸಮಾಜವನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕಾಗಿದೆ ಎಂದು ತಿಳಿಸಿದರು.

ತೀಯಾ ಸಮಾಜವನ್ನು ಗುರುತಿಸಿಕೋಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಯಾವುದೇ ಸಮಸ್ಯೆ ಬಂದಾಗ ನಾವು ಪಕ್ಷ ಭೇದ ಮರೆತು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಯು.ಟಿ. ಖಾದರ್ ಬೇರೆ ಬೇರೆ ಕಡೆಗಳಲ್ಲಿ ನಮಗೆ ಸಮುದಾಯ ಭವನ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ, ಆದರೆ ಇಲ್ಲಿಯೂ ಸಮುದಾಯ ಭವನಕ್ಕೆ ನಮಗೆ ಸಹಕಾರ ಬೇಕಾಗಿದೆ, ಹಾಗೇಯೆ ನಮ್ಮದೇ ಆದ ನಿಗಮ ಸ್ಥಾಪನೆಗೆ ಖಾದರ್ ವಿಶೇಷ ಮುತುವರ್ಜಿ ಮಾಡಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಭಾರತೀಯ ತೀಯಾ ಸಮಾಜದ ಅಧ್ಯಕ್ಷ ಸದಾಶಿವ ಉಳ್ಳಾಲ್ ತಿಳಿಸಿಸಿದರು. ಸಮಾಜಕ್ಕೆ ಏನಾದರು, ಬೇಕಾದಾಗ ನಾವೆಲ್ಲರೂ ಒಟ್ಟಾಗುತ್ತೇವೆ ಎನ್ನುವುದಕ್ಕೆ ಈ ಸಭೆಯೇ ಸಾಕ್ಷಿ, ಇಲ್ಲಿ ಎಲ್ಲಾ ಪಕ್ಷದವರು ಇದ್ದಾರೆ. ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ತೀಯಾ ಸಮುದಾಯ ಭವನಕ್ಕೆ ಸಹಕಾರ ನೀಡಿದ್ದಾರೆ.

ನಮ್ಮ ಬೇಡಿಕೆಯನ್ನು ಈಡೇರಿಸುತ್ತೀರಿ ಎನ್ನುವ ಭರವಸೆಯೊಂದಿಗೆ ನಾವು ನಿಮ್ಮೊಂದಿಗಿದ್ದೇವೆ, ಎಂದು ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್ ತಿಳಿಸಿದರು. ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ನಾಟಿವೈದ್ಯ ಗಣೇಶ್ ಪಂಡಿತ್, ಕೊ.ಅಪರೇಟಿವ್ ರಾಜ್ಯ ಮಟ್ಟದ ಪರೀಕ್ಷೆ HDMCಯಲ್ಲಿ ಪ್ರಥಮ ರ್‍ಯಾಂಕ್ ವಿಜೇತೆ ಯಶವಂತಿ ಜಪ್ಪು ಹಾಗೂ ಹೈಜಂಪ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಸೃಜನ್ ಜನಾರ್ಧನ್ ಇವರನ್ನು ಈ ಸಂದರ್ಭದಲ್ಲಿ ಸಂಮಾನಿಸಲಾಯಿತು. ತೋನ್ಸೆ ಪುಷ್ಕಳ್ ಕುಮಾರ್, ಸುರೇಶ್ ಭಟ್ನಗರ್, ಯಶವಂತ ಉಚ್ಚಿಲ್, ಸವಿತಾ ತಲಪಾಡಿ, ಉಮೇಶ್ ಬೆಂಜನಪದವು ಮುಖ್ಯ ಅತಿಥಿಗಳಾಗಿ ವೇದಿಕಯಲ್ಲಿ ಉಪಸ್ಥಿತರಿದ್ದರು. ಯಶವಂತಿ ಜೆ. ಪ್ರಾರ್ಥನೆಗೈದರು. ದಿನೇಶ್ ಕುಂಪಲ ಸ್ವಾಗತಿಸಿ ಪ್ರಸ್ತಾವನೆಗೈದರು. ಸತೀಶ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು

Related Posts

Leave a Reply

Your email address will not be published.