ಮೂಡಬಿದಿರೆ : ಕಡ್ದಬೆಟ್ಟು ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಉಮಾನಾಥ ಕೋಟ್ಯಾನ್ ಮತಯಾಚನೆ

ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಗಾಂಧಿನಗರದ ಕಡ್ದಬೆಟ್ಟು ವಾಡ್ 9ನಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ ಎ.ಕೋಟ್ಯಾನ್ ಅವರು ಕಾರ್ಯಕರ್ತರ ಜತೆ ಮಾತುಕತೆ ನಡೆಸಿ ಮತದಾನ ಮಾಡುವಂತೆ ವಿನಂತಿಸಿದರು.

ನಂತರ ಕಾರ್ಯಕರ್ತರು ಕಡ್ದಬೆಟ್ಟು ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಪರವಾಗಿ ಮತಯಾಚಿಸಿದರು.
ವಾಡ್ 9 ಸದಸ್ಯೆ ದಿವ್ಯಾ ಜಗದೀಶ್, ಮಂಡಲದ ಕೋಶಾಧಿಕಾರಿ ಹರೀಶ್ ಎಂ.ಕೆ, 64ನೇ ವಾರ್ಡಿನ ಬೂತ್ ಅಧ್ಯಕ್ಷ ವಸಂತ, 65ನೇ ವಾರ್ಡಿನ ಬೂತ್ ಅಧ್ಯಕ್ಷ ಸುನೀಲ್, ನೇತಾಜಿ ಬ್ರಿಗೇಡ್ ನ ಸಂಚಾಲಕ ರಾಹುಲ್ ಕುಲಾಲ್, ಜಗದೀಶ್ ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.
