ಕಲ್ಲಮುಂಡ್ಕೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ : ಶಾಸಕ ಉಮಾನಾಥ ಕೋಟ್ಯಾನ್‍ರಿಂದ ಶಿಲಾನ್ಯಾಸ

ಮೂಡುಬಿದಿರೆ: ಕಲ್ಲಮುಂಡ್ಕೂರು ಗ್ರಾ.ಪಂ.ವ್ಯಾಪ್ತಿಯಲ್ಲಿ 2.10 ಕೋ.ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ 1.94 ಕೋಟಿ ವೆಚ್ಚದ ಜಲಜೀವನ್ ಮಿಷನ್ ಯೋಜನೆಯ ಒಟ್ಟು 4.04 ಕೋ.ವೆಚ್ಚದ ಕಾಮಗಾರಿಗಳಿಗೆ ಶಾಸಕ ಉಮಾನಾಥ ಎ.ಕೋಟ್ಯಾನ್ ಸೋಮವಾರ ಗುದ್ದಲಿಪೂಜೆ ನೆರವೇರಿಸಿದರು.

kallamundkur

ನಂತರ ನೀರುಡೆ ಚಚ್ 9 ಬಳಿಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೋಟ್ಯಾನ್ ಅವರು ಕಲ್ಲಮುಂಡ್ಕೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾಮಗಾರಿಗಳು ಇದೀಗ ನಾಲ್ಕು ವರ್ಷಗಳಲ್ಲಿ ವಿಶೇಷ ಪ್ರಯತ್ನದೊಂದಿಗೆ ಆಗುತ್ತಿವೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡಿಲ್ಲ ಆದ್ದರಿಂದ ತನ್ನ ವಿಧಾನಸಭಾ ಕ್ಷೇತ್ರಕ್ಕೆ ರೂ 1,800 ಕೋಟಿ ಅನುದಾನಗಳನ್ನು ತಂದು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಸಹಕಾರಿಯಾಯಿತು.ನೀರುಡೆಯಲ್ಲಿ ರೂ 60 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ನೆರವೇರಿಸಲಾಗಿದೆ ಎಂದು ಹೇಳಿದ ಅವರು ಇನ್ನೂ 300 ಕೋಟಿಯಷ್ಟು ಅನುದಾನ ಚಾಲ್ತಿಯಲ್ಲಿದೆ ಎಂದರು.

ನೀರುಡೆ ಚಚ್ 9ನ ಧರ್ಮಗುರು ಆಲ್ಬನ್ ರೊಡ್ರಿಗಸ್ ಆರ್ಶೀವಚನ ನೀಡಿ ಕುಡಿಯುವ ನೀರಿನ ಬೇಡಿಕೆಗಳು ಹೆಚ್ಚುತ್ತಿದೆ. ಸಂಚಾರಕ್ಕೆ ರಸ್ತೆಗಳು ಅಗತ್ಯವಾಗಿಬೇಕು ಈ ನಿಟ್ಟಿನಲ್ಲಿ ಶಾಸಕರು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದು ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ಮಾಡುವಂತ್ತಾಗಲಿ ಎಂದು ಶುಭ ಹಾರೈಸಿದರು.ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ನಡೆದ ಗುದ್ದಲಿಪೂಜೆಯ ಅಧ್ಯಕ್ಷತೆಯನ್ನು ಕೇಶವ ಪೂಜಾರಿ ವಹಿಸಿದ್ದರು.ಪಂಚಾಯತ್ ಉಪಾಧ್ಯಕ್ಷೆ ಕಲ್ಯಾಣಿ, ಸದಸ್ಯರುಗಳಾದ ಸಂಜೀವ ಪೂಜಾರಿ, ವಸಂತ್ ನಾಯ್ಕ್, ಗಿರೀಶ್ ಪೂಜಾರಿ, ಪ್ರೇಮ ಶೆಟ್ಟಿ, ಆಶಾಲತಾ ಶೆಟ್ಟಿ, ಲೀಲಾ, ಶಕುಂತಲಾ ಪೂಜಾರಿ, ಜನಾರ್ದನ ಗೌಡ,ಲವೀನಾ ಡಿ”ಸೋಜಾ, ತೆಂಕಮಿಜಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾದ ಸಮಿತಾಶೆಟ್ಟಿ, ಸದಸ್ಯರಾದ ದಿನೇಶ್ ಕುಮಾರ್, ಎಕ್ಕಾರು ಗ್ರಾ.ಪಂ.ಸದಸ್ಯ ಸತೀಶ್, ಪ್ರತೀಕ್ ಶೆಟ್ಡಿ, ಟ್ಯಾಂಕ್ ನಿರ್ಮಾಣಕ್ಕೆ ಜಾಗ ನೀಡಿರುವ ದಾನಿ ಜೈಸನ್, ಗುತ್ತಿಗೆದಾರರಾದ ಯಾಲಕ್ಕಿ ಗೌಡ, ಅರುಣ್ ಭಟ್, ಲೋಕಾಪಯೋಗಿ ಇಲಾಖೆಯ ಇಂಜಿನಿಯರ್ ಸಂಜೀವ ನಾಯ್ಕ್, ಹಿರಿಯ ಕಾರ್ಮಿಕ ನಿರೀಕ್ಷಕ ರಾಜಶೇಖರ್ ರೆಡ್ಡಿ, ಜಲಜೀವನ್ ಮಿಷನ್ ಯೋಜನೆಯ ಸಹಾಯಕ ಇಂಜಿನಿಯರ್ ಸಂದೀಪ್, ಕುದ್ರಿಪದವು ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್, ಪಿಡಿಓ ಪ್ರಶಾಂತ್ ಶೆಟ್ಟಿ, ಕಾರ್ಯದರ್ಶಿ ಶೇಖರ್, ಮತ್ತಿತರರು ಈ ಸಂದರ್ಭದಲ್ಲಿದ್ದರು.

Related Posts

Leave a Reply

Your email address will not be published.