ಬೆಳ್ತಂಗಡಿ ದಂಪತಿಗೆ ಬಂದ ಅನಾಮಧೇಯ ಕರೆ
ಪಾಕಿಸ್ತಾನದ ಪೋನ್ ಕರೆಯಿಂದ ಕಂಗಾಲಾದ ಬೆಳ್ತಂಗಡಿಯ ದಂಪತಿ ಇದೀಗ ಪೋಲಿಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪಟ್ರಮೇ ಗ್ರಾಮದ ದಂಪತಿಗಳಿಗೆ ಪೋನ್ ಮಾಡಿ ನಿಮ್ಮ ಮಗ ರೇಪ್ ಕೇಸಿನಲ್ಲಿ ಸಿಕ್ಕಿ ಹಾಕಿ ಕೊಂಡಿದ್ದಾನೆ ನೀವು ಏನಾದರೂ ಮಾತು ಕಥೆ ಮಾಡಿ ಮುಗಿಸಿ ಎಂದು ಹೇಳಿದಾಗ ತಾಯಿಯು ಗಾಬರಿಗೊಂಡು ತನ್ನ ಗಂಡನಿಗೆ ಮೊಬೈಲ್ ಕೊಟ್ಟು ಮಾತನಾಡಿದಾಗ ಮಗನ ಕೈಯಲ್ಲಿ ಪೋನ್ ಕೊಡಿ ಎಂದಾಗ ಅತ್ತ ಕಡೆಯಿಂದ ಅಳುವ ಶಬ್ದ ಕೇಳಿಸಿತು ಆಗ ಗಾಬರಿಗೊಂಡ ದಂಪತಿಗಳು ಮಗ ಹೋಗುವ ಶಾಲೆಯಲ್ಲಿ ವಿಚಾರಿಸಿದಾಗ ಆತ ತನ್ನ ಶಾಲೆಯಲ್ಲಿಯೇ ಇರುವುದು ಗಮನಕ್ಕೆ ಬಂದಿದೆ ಆಗ ದಂಪತಿಗಳಿಗೆ ಇದೊಂದು ಅನಾಮಧೇಯ ವ್ಯಕ್ತಿಗಳು ಪೋನ್ ಮಾಡುವುದೆಂದು ಗೊತ್ತಾಗಿ ಕೂಡಲೇ ಧರ್ಮಸ್ಥಳ ಪೊಲೀಸರಿಗೆ ವಿಚಾರ ತಿಳಿಸಿದರು.ಆದರೆ ಈ ನಂಬರ್ ಪಾಕಿನದ್ದಾಗಿದ್ದು ಇದರ ಹಿಂದೆ ಯಾರು ಯಾರು ಇದ್ದಾರೆ ಎಂದು ತನಿಖೆ ವೇಳೆ ಗೊತ್ತಾಗಬೇಕಿದೆ,