ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಮಹಿಳೆಯ ರಕ್ಷಣೆ
ಉಡುಪಿಯಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಮಹಿಳೆಯನ್ನು ರಕ್ಷಿಸಿರುವ ಘಟನೆ ನಡೆದಿದೆ.
ಮನನೊಂದು ಮನೆ ಬಿಟ್ಟ ಮಹಿಳೆಯು ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣದಿಂದ ಉಡುಪಿಗೆ ಬಂದಿದ್ದಳು. ಶ್ರೀಕೃಷ್ಣ ಮಠದಲ್ಲಿ ಅನ್ನಪ್ರಸಾದ ಸೇವಿಸಿ ಕೆಲವು ದಿನಗಳಿಂದ ದಿನಕಳೆಯುದಿದ್ದಳೆಂದು ತಿಳಿದುಬಂದಿದೆ. ಮಹಿಳೆಯ ಅಸಹಾಯಕತೆಯನ್ನು ಗಮನಿಸಿದ ಬೀದಿ ಕಾಮಣ್ಣರು,ಹಿಂಬಾಲಿಸುತ್ತಿದ್ದರಿಂದ, ಮಹಿಳೆ ಭೀತಿಗೊಳಗಾಗಿದ್ದಳು. ಮಾಹಿತಿ ತಿಳಿದ ಸಮಾಜಸೇವಕ ನಿತ್ಯಾನಂದ ಒಳಕಾಡುವರು ಮಹಿಳಾ ಪೋಲಿಸ್ ಠಾಣೆಯ ನೆರವು ಪಡೆದು ಮಹಿಳೆಯ ರಕ್ಷಣಾ ಕಾರ್ಯಾಚರಣೆ ನಡೆಸಿದರು. ರಕ್ಷಿಸಲ್ಪಟ್ಟ ಮಹಿಳೆಗೆ ನಿಟ್ಟೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಖಿ ಓನ್ ಸೆಂಟರ್ ಇಲ್ಲಿ ತುರ್ತು ಪುನರ್ವಸತಿ ಕಲ್ಪಿಸಲಾಗಿದೆ. ರಕ್ಷಿಸಲ್ಪಟ್ಟ ಮಹಿಳೆಯ ಬಳಿ ಆಧಾರ್ ಚೀಟಿ ಪತ್ತೆಯಾಗಿದ್ದು. ಗೀತಾ. ಪತಿ ಸುರೇಶ್ ಆಚಾರಿ, ಹೂವಿನಹಳ್ಳಿ ಬಿಂಡಿಗಾ, ಮಾಲೇನಹಳ್ಳಿ, ಚಿಕ್ಕಮಗಳೂರು ಜಿಲ್ಲೆ ಎಂಬ ಉಲ್ಲೇಖ ಇದೆ.