ಮರವಂತೆ ಕಡಲ ತೀರದಲ್ಲಿ ಉಪಾಧ್ಯಕ್ಷ ಫಿಲಂ ಶೂಟಿಂಗ್

ಬೈಂದೂರು ತಾಲೂಕಿನ ವಿಶ್ವಪ್ರಸಿದ್ಧ ಮರವಂತೆ ಕಡಲ ತೀರದಲ್ಲಿ ಹಾಗೂ ಕುಂದಾಪುರ ಉಡುಪಿಯ ಪರಿಸರದಲ್ಲಿ ಇಂದು ಉಪಾಧ್ಯಕ್ಷ ಫಿಲಂ ಶೂಟಿಂಗ್ ನಡೆಯಿತು.ಸ್ಯಾಂಡಲ್‍ವುಡ್‍ನಲ್ಲಿ ಕಾಮಿಡಿ ಕಿಂಗ್ ಎಂದು ಹೆಸರು ಮಾಡಿದ ಖ್ಯಾತರಾದ ಚಲನಚಿತ್ರ ನಟ ಚಿಕ್ಕಣ್ಣ ಕೆಲವೊಂದು ಸಿನಿಮಾಗಳಲ್ಲಿ ಇವರೇ ಹೀರೋಗಿಂತ ಹಾಸ್ಯ ನಟನಾಗಿ ಹೆಚ್ಚಾಗಿ ಮಿಂಚಿದ್ದು, ಈಗ ಉಪಾಧ್ಯಕ್ಷ ಚಿತ್ರದಲ್ಲಿ ನಾಯಕನಾಗಿ ಮೋಡಿ ಮಾಡಲು ಸಜ್ಜಾಗಿದ್ದಾರೆ.

ಸಾಕಷ್ಟು ಹಿಟ್ ಚಿತ್ರಗಳ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಚಿಕ್ಕಣ್ಣ ಉಪಾಧ್ಯಕ್ಷ ಚಿತ್ರದ ಪೂರ್ಣ ಪ್ರಮಾಣದ ತೆರೆಯ ಮೇಲೆ ನಾಯಕನಾಗಿ ಮಿಂಚಲಿದ್ದಾರೆ. ಇನ್ನು ಈ ಚಿತ್ರ ನಾಯಕಿಯಾಗಿ ಮಲ್ಲಿಕಾ ಪ್ರಥಮ ಬಾರಿಗೆ ಸಿನಿಮಾದ ನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

Related Posts

Leave a Reply

Your email address will not be published.