ಉಪ್ಪಳ : ಶಾಲಾ ಚಪ್ಪರ ಕುಸಿತ : ವಿದ್ಯಾರ್ಥಿಗಳಿಗೆ ಗಾಯ
ಶಾಲಾ ವಿಜ್ಞಾನ ಮೇಳ ಕಾರ್ಯಕ್ರಮ ನಡೆಯುತ್ತಿದ್ದಾಗ ಚಪ್ಪರ ಕುಸಿದು ಹಲವಾರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ಉಪ್ಪಳ ಸಮೀಪದ ಬೇಕೂರು ಶಾಲೆಯಲ್ಲಿ ನಡೆದಿದೆ.
ಬೇಕೂರು ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಮೂರು ದಿನಗಳ ವಿಜ್ಞಾನ ಮೇಳ ಆಯೋಜಿಸಲಾಗಿದ್ದು, ಎರಡನೇ ದಿನವಾದ ಇಂದು ಈ ಅವಘಡ ನಡೆದಿದೆ.
ತಗಡು ಶೀಟ್‍ನ ಚಪ್ಪರ ದಿಢೀರನೆ ಕುಸಿದು ಬಿದ್ದಿದೆ. ಈ ಸಂದರ್ಭ 200 ಕ್ಕೂ ಅಧಿಕ ವಿದ್ಯಾರ್ಥಿಗಳು ಚಪ್ಪರದಡಿಯಲ್ಲಿ ಸಿಲುಕಿದ್ದರು ಎನ್ನಲಾಗಿದೆ. ವಿದ್ಯಾರ್ಥಿಗಳನ್ನು ರಕ್ಷಿಸಿ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ದಲ್ಲಿ ಕೆಲ ಶಿಕ್ಷಕರು ಮತ್ತು ತೀರ್ಫುಗಾರರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.