ಉಪ್ಪಿನಂಗಡಿ: ಕಾರು ಮತ್ತು ಬಸ್‌ ಅಪಘಾತ ಇಬ್ಬರು ಗಂಭೀರ

ಉಪ್ಪಿನಂಗಡಿ : ಅ 2 : ಕಾರು ಮತ್ತು ಬಸ್‌ ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಮಂಗಳವಾರ ( ಅ .2) ಸಂಜೆ ಸಂಭವಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಡಬ ತಾಲೂಕಿನ ರಾಮಕುಂಜ ನಿವಾಸಿಗಳಾದ ಉಪನ್ಯಾಸಕ ಗೋವಿಂದರಾಜ್‌ ಶರ್ಮಾ(32) ಮತ್ತು ಓಂಕಾರ್‌ ಪ್ರಸಾದ್‌ (30) ಗಾಯಗೊಂಡವರು . ಅಪಘಾತವೂ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಕಾರು ಹಾಸನ ಜಿಲ್ಲೆಯ ಸಕಲೇಶಪುರದಿಂದ ಕಡಬ ತಾಲೂಕಿನ ರಾಮಕುಂಜಕ್ಕೆ ಹಿಂತಿರುಗುತ್ತಿದ್ದಾಗ ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಮಧ್ಯೆ ಅಪಘಾತ ಘಟಿಸಿದೆ

Related Posts

Leave a Reply

Your email address will not be published.