ಉಪ್ಪುಂದ : ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ

ಶ್ರಮ್ ಚಾರಿಟೇಬಲ್ ಟ್ರಸ್ಟ್ ರಿ ಉಪ್ಪುಂದ ಮತ್ತು ಉಡುಪಿ ಜಿಲ್ಲಾ ಭಾರತೀಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಇವರ ವತಿಯಿಂದ ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಶ್ರೀ ದೇವರಿಗೆ ವಿಶೇಷ ಬಾಳೆದಿಂಡಿನ ಗೋಪುರ ನಿರ್ಮಿಸಿ ವಿವಿಧ ಜಾತಿಯ ಹೂಗಳಿಂದ ಜಾತಿಯ ಅಲಂಕರಿಸಲಾಗಿತ್ತು.ಮಣೆಯ ಮೇಲೆ ಹೊಸ ಬಟ್ಟೆಯನ್ನು ಹಾಕಿ ಅದರ ಮೇಲೆ ಅಕ್ಕಿ ಹರಡಿ ಕಳಶ ಇಟ್ಟು ಅದಕ್ಕೆ ಕುಂಕುಮ, ಅರಿಸಿಣ ಹಚ್ಚಲಾಗಿತ್ತು, ಕಳಸದ ಮೇಲೆ ತೆಂಗಿನಕಾಯಿ ಇಟ್ಟು ಲಕ್ಷ್ಮೀದೇವಿಯ ಮುಖವಾಡ ತೊಡಿಸಿ, ಕಲಶಕ್ಕೆ ಹೊಸ ರವಿಕೆ ರೇಷ್ಮೆ ಸೀರೆ ಉಡಿಸಿ ಒಡವೆ ಹಾಕಿ ಹೂಗಳಿಂದ ಅಲಂಕರಿಸಿ, ವೀಳ್ಯದ ಎಲೆ, ಮಾವಿನ ಎಲೆಗಳನ್ನು ಜೋಡಿಸಿ, ದೇವರ ಮುಂದೆ ರಂಗೋಲಿ ಬಿಡಿಸಲಾಗಿತ್ತು.

ಮಧ್ಯಾಹ್ನ ದೇವಿಗೆ ಪಾಯಸ, ಹೋಳಿಗೆ,ಹಣ್ಣು ನೈವೇದ್ಯ ರೂಪದಲ್ಲಿ ಸಮರ್ಪಿಸಿದ ನಂತರ ಗೃಹಿಣಿಯರು ಸಾಮೂಹಿಕವಾಗಿ ಆರತಿ ಬೆಳಗಿ ದೇವಿಯ ಕೃಪೆಗೆ ಪಾತ್ರರಾದರು.ಪೂಜಾ ಕಾರ್ಯಕ್ರಮದ ಬಳಿಕ ಸಭಾ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಹನ್ ವಹಿಸಿ ಮಾತನಾಡಿದ ಅವರು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದಾರೆ,ಈ ಪೂಜಾ ಕಾರ್ಯಕ್ರಮದ ಮೂಲ ಉದ್ದೇಶ ಎಲ್ಲಾ ಕಾರ್ಮಿಕರು ಆರೋಗ್ಯವಾಗಿ ಸುಖ ಸಂತೋಷ ನೆಮ್ಮದಿಯಿಂದ ಬದುಕಬೇಕು. ಕರೋನ ಎಂಬ ಖಾಯಿಲೆ ವಿಶ್ವವ್ಯಾಪಿ ಹರಡಿ ಜನರ ಜೀವನ ಅಸ್ತವ್ಯಸ್ತ ಮಾಡಿದೆ ಇಂತಹ ಸಂದರ್ಭದಲ್ಲಿ ನಾವು ಜಾಗ್ರಕರಾಗಿ ಆರೋಗ್ಯ ಮತ್ತು ಸ್ವಚ್ಛತೆ ಕಡೆ ಗಮನ ಹರಿಸಿ ಬೇಕಾಗಿದೆ ಹಾಗೂ ನಮಗೆ ಸ್ವಾತಂತ್ರ ಸಿಕ್ಕಿದ ಎಪ್ಪತ್ತೈದು ವರ್ಷದ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಎಲ್ಲರ ಮನೆಯಲ್ಲೂ ಧ್ವಜವನ್ನು ಹಾರಿಸುವ ಮೂಲಕ ನಮ್ಮ ಐಕ್ಯತೆಯನ್ನು ಸಾರ ಬೇಕಾಗಿದೆ ಎಂದರು.

ಈ ಸಂದರ್ಭ ವಿಜಯ್ ಕೊಡವೂರು, ರಾಘವೇಂದ್ರ ಅಜೇಕಾರ್ ,ಗೌರಿ ದೇವಾಡಿಗ, ಸಂತೋಷ್, ಸಂಘಟನಾ ಸದಸ್ಯರು ಉಪಸ್ಥಿತರಿದ್ದರು ಯಮುನಾ ಸವಿತಾ ಕಾರ್ಯಕ್ರಮ ನಿರೂಪಿಸಿದರು ಶಶಿರಾಜ್ ಮಯ್ಯಾಡಿ ವಂದಿಸಿದರು

Related Posts

Leave a Reply

Your email address will not be published.