ಪಂಜರು ಕೃಷಿಯಲ್ಲಿ ಸಾಧನೆಗೈದ ಉಪ್ಪುಂದ ಕರ್ಕಿಕಳಿ ಯುವ ಸಮುದಾಯ

ಮುಕ್ತ ಸಮಾಜದಲ್ಲಿ ದುಡಿದು ತಿನ್ನುವ ಹಂಬಲವಿದ್ದರೆ, ಕಾಯಕಕ್ಕೇನು ಕೊರತೆ ಇಲ್ಲಾ ಎನ್ನುವುದನ್ನು ನಮ್ಮ ಕರಾವಳಿಯ ಯುವ ಸಮುದಾಯ ಸಾಬೀತು ಪಡಿಸಿದೆ. ಕರಾವಳಿ ಭಾಗದಲ್ಲಿ ಮೀನುಗಾರಿಕೆಗೆ ಪ್ರಮುಖ ಕಸುಬು ಎಂದರೆ ತಪ್ಪಾಗಲಾರದೇನು, ಅದರಿಂದಲೇ ಎಸ್ಟೋ ಜನ ಯಶಸ್ಸು ಕಂಡವರಿದ್ದಾರೆ. ಅಂತೆಯೇ ಇದೀಗ ಹೊಸ ಪ್ರಯೋಗವೆಂಬಂತೆ ಪಂಜರು ಕೃಷಿಯನ್ನು ಆರಂಭಿಸಿ, ಅದರಿಂದ ಯಶಸ್ಸು ಗಳಿಸಿದ ಯುವ ಸಮೂಹ ಸಮಾಜಕ್ಕೇ ಹೊಸ ಉದ್ಯಮದ ಭರವಸೆ ನೀಡಿದೆ.

ಬೈಂದೂರು ತಾಲೂಕಿನ ಉಪ್ಪುಂದ ಉಪ್ಪುಂದ ಕರ್ಕಿಕಳಿ ನಿವಾಸಿ ಚಂದ್ರ ಕಾರ್ವಿ ಅವರ ಕಳೆದ 13 ವರ್ಷಗಳಿಂದ ಪಂಜರು ಮೀನು ಕೃಷಿಯಲ್ಲಿ ಸಾಧನೆಗೈದಿದ್ದು.
ಇವರು ಕುರುಡಿ ಮೀನನ್ನು ಮತ್ತು ಕೆಂಬೇರಿ ಮೀನು ಮರಿಗಳನ್ನು ಆಂಧ್ರದಿಂದ ತರಿಸಿಕೊಂಡು ಹತ್ತಿರದ ನದಿಯಲ್ಲಿ ಪಂಜರದೋಳಗೆ ಸಾಕಿ ಬೆಳವಣಿಗೆ ಆದ ನಂತರ ಇದನ್ನು ಬೇರೆ ಕಡೆಗೆ ಮಾರಾಟ ಮಾಡುತ್ತಾರೆ. ಇದರಿಂದ ಬಹಳಷ್ಟು ಲಾಭ ಕಂಡುಕೊಂಡ ಇವರು ಇದನ್ನೆ ಬೇರೆ ಉದ್ಯೋಗ ಆಕಾಂಕ್ಷಿಗಳಿಗೂ ಮಾಡುವಂತೆ ಸಲಹೆ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಹೆಚ್‍ಪಿ ನಾಗರಾಜ್ ಬಿಹೆಚ್‍ಕೆ ಆನಂದ ಖಾರ್ವಿ, ಪ್ರಭಾಕರ್ ಖಾರ್ವಿ, ಅಭಿಷೇಕ್ ಖಾರ್ವಿ, ಸೌರವ್ ಖಾರ್ವಿ, ಉಪಸ್ಥಿತರಿದ್ದರು.

Related Posts

Leave a Reply

Your email address will not be published.