ಶಾಂತಿ ಸಾಮರಸ್ಯ ಹದಗೆಡುವ ಸಂಘಟನೆಗಳ ವಿರುದ್ದ ಕ್ರಮಕೈಗೊಳ್ಳಲಿ : ಯು.ಟಿ.ಖಾದರ್
ದೇಶದಲ್ಲಿ ಶಾಂತಿ ಸಾಮರಸ್ಯ ಹದಗೆಡಿಸುವ ಯಾವುದೇ ಸಂಘಟನೆ ವಿರುದ್ಧ ಕ್ರಮ ಆಗಬೇಕು. ಇದು ಸರ್ಕಾರದ ಜವಾಬ್ದಾರಿ, ಹಾಗಾಗಿ ಎಲ್ಲಾ ಸಂಘ ಸಂಸ್ಥೆಗಳ ಮೇಲೆ ಕ್ರಮ ಆಗಲಿ ಎಂದು ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಹೇಳಿದರು.
ಅವರು ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. ಹಲ್ಲೆ, ಅಶಾಂತಿ, ಕೋಮುದ್ವೇಷದ ಸಂಘಟನೆ ವಿರುದ್ದ ಕ್ರಮ ಕೈಗೊಳ್ಳಲಿ. ತಾರತಮ್ಯ ಮಾಡದೇ ಸದುದ್ದೇಶದಿಂದ ಕ್ರಮ ವಹಿಸಲಿ. ಒಂದು ಕ್ರಮದ ಮೂಲಕ ಸಮಾಜದಲ್ಲಿ ಅಶಾಂತಿ ಕಡಿಮೆಯಾಗಬೇಕು. ಉತ್ತಮ ಸಮಾಜ ನಿರ್ಮಾಣ ಮಾಡಲು ಕ್ರಮಗಳು ಅತ್ಯಗತ್ಯ. ಬ್ಯಾನ್ ಮಾಡುವ ವಿಚಾರದಲ್ಲಿ ಕಾನೂನು ಮತ್ತು ಕೋರ್ಟ್ ಅದನ್ನ ನೋಡುತ್ತದೆ. ಸಮಾಜ ಒಡೆಯುವ ಯಾವುದೇ ಸಂಘಟನೆಗಳ ಮೇಲೆ ಕ್ರಮ ವಹಿಸಬೇಕು. ಯಾವುದೇ ಸಂಘಟನೆಗಳನ್ನ ಸಮಾಜದಲ್ಲಿ ಹೇಗೆ ಬಿಂಬಿಸ್ತಾರೆ ಗೊತ್ತಿಲ್ಲ. ಅಂತಹ ಯಾವುದೇ ಮಾಹಿತಿ ನನಗಿಲ್ಲ. ಸಮಾಜದ ಬಹುತೇಕ ಜನರಿಗೆ ಪ್ರೀತಿ, ಸೌಹಾರ್ದತೆ ಬೇಕು. ರಾಜಕೀಯವಾಗಿ ಯಾವ ಪರಿಣಾಮ ಅಗುತ್ತೆ ಅನ್ನೋದು ನನಗೆ ಗೊತ್ತಿಲ್ಲ. ಸಾಕ್ಷ್ಯಧಾರ ಇದ್ದಲ್ಲಿ ತಾರತಮ್ಯ ಮಾಡದೇ ಕ್ರಮ ತೆಗೆದುಕೊಳ್ಳಬೇಕು ಎಂದು ಖಾದರ್ ಹೇಳಿದರು.