ರಸ್ತೆ ಗುಂಡಿ, ಚರಂಡಿ ಅಭಿವೃದ್ಧಿ ಮಾಡುವ ಯೋಗ್ಯತೆ ಇಲ್ಲ : ನಳಿನ್ ವಿರುದ್ಧ ಮಾಜಿ ಸಚಿವ ಯು.ಟಿ.ಖಾದರ್ ವಾಗ್ದಾಳಿ

ರಸ್ತೆ ಗುಂಡಿ, ಚರಂಡಿ ಅಭಿವೃದ್ಧಿ ಮಾಡುವ ಯೋಗ್ಯತೆ, ಅರ್ಹತೆ ಇಲ್ಲದವರು, ಭಾವನಾತ್ಮಕ ವಿಚಾರದ ಮೂಲಕವೇ ರಾಜಕಾರಣ ಮಾಡುತ್ತಿದ್ದಾರೆ ಎಂದು ನಳಿನ್ ವಿರುದ್ಧ ಮಾಜಿ ಸಚಿವ ಹಾಗೂ ಶಾಸಕ ಯು.ಟಿ.ಖಾದರ್ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಗುಂಡಿ, ಚರಂಡಿ ಅಭಿವೃದ್ಧಿ ಮಾಡುವ ಯೋಗ್ಯತೆ ಎಂಬುವುದನ್ನ ಕಳೆದ ನಾಲ್ಕು ವರ್ಷ ಜನರಿಗೆ ತೋರಿಸಿಕೊಟ್ಟಿದ್ದಾರೆ.
ಚುನಾವಣೆ ಹತ್ತಿರ ಬಂದಾಗ ಇಂತಹ ಹೇಳಿಕೆ ನೀಡುತ್ತಿದ್ದಾರೆ. 2 ಸಾವಿರಕ್ಕೆ ಮರಳನ್ನು ಕೋಡುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಅದನ್ನು ಕೊಡಲು ಸಾಧ್ಯವಾಯಿತಾ ಎಂದು ಪ್ರಶ್ನಿಸಿದ ಖಾದರ್, ಇವರಿಗೆ ಕುಚಲಕ್ಕಿ ಕೊಡಲು ಸಾಧ್ಯವಾಗಿಲ್ಲ, ಹಾಗಾಗಿ ಜನರನ್ನು ಧಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಡಬಲ್ ಇಂಜಿನ್ ಸರ್ಕಾರದ ಪುಯೆಲ್ ಕಮ್ಯುನಲ್, ಅದರ ಹೊಗೆಯೇ ವಿಷವಾಗಿದೆ. ಬಡವರ ರಕ್ತ ಮತ್ತು ಕಣ್ಣೀರಿನಲ್ಲಿ ಸರ್ಕಾರ ರಚಿಸಿದ್ದಾರೆ. ಹಾಗಾಗಿ ಡಬಲ್ ಇಂಜಿನ್ ಸರ್ಕಾರವನ್ನು ಜನರನ್ನು ಗುಜಿರಿಗೆ ಹಾಕುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದ್ರು. ಇನ್ನು ಮುಂದಿನ ದಿನಗಳಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ರಮಾನಾಥ್ ರೈ ಉಸ್ತುವಾರಿ ಮಂತ್ರಿಯಾಗುತ್ತಾರೆ. ಅದನ್ನು ತಪ್ಪಿಸಲು ಯಾರಿದಲೂ ಸಾಧ್ಯವಿಲ್ಲ. ಸಮಾಜದಲ್ಲಿ ಜಾತಿ ಧರ್ಮ ಆಧಾರದಲ್ಲಿ ಬಿರುಕು ಮೂಡಿಸುವ ಕೆಲಸ ಮಾಡುತ್ತಾರೆ. ಅದು ಯಾವುದೇ ಸಾಧ್ಯವಿಲ್ಲದಾಗ, ಪಕ್ಷದ ನಾಯಕರ ನಡುವೆಯೇ ಬಿರುಕು ಮೂಡಿಸಲು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಖಾದರ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
