ಖಾಸಗಿ ಬಸ್ ಮಹಿಳೆಯರಿಗೆ ಫ್ರೀ ಆಗಲಿ : ವಿ. ಸುನಿಲ್ ಕುಮಾರ್ ಟ್ವೀಟ್ ಖಂಡಿಸಿದ ಕಿಶನ್ ಹೆಗ್ಡೆ ಕೊಳ್ಕೆಬೈಲ್

ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಗ್ಯಾರಂಟೀ ಗೆ ನೂತನ ಸಾರಿಗೆ ಸಚಿವರಾದ ಡಾ. ರಾಮಲಿಂಗಾರೆಡ್ಡಿ ತೆರೆ ಎಳೆದಿದ್ದಾರೆ. ಮೇ 30 ರಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲ ಮಹಿಳೆಯರು ಯಾವುದೇ ಷರತ್ತುಗಳಿಲ್ಲದೆ ಪ್ರಯಾಣಿಸಬಹುದು ಎಂದು ತಿಳಿಸಿದರು. ಆದರೆ ಈ ಗ್ಯಾರಂಟೀ ರಾಜ್ಯಾದ್ಯಂತ ಯಾವಾಗಿನಿಂದ ಜಾರಿಯಾಗಲಿದೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್, ರಾಜ್ಯ ಸರ್ಕಾರಕ್ಕೆ ತಲೆನೋವು ನೀಡಿದರು. ತಮ್ಮ ಟ್ವೀಟ್ ನಲ್ಲಿ ಅವರು, ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಸರಕಾರಿ ಬಸ್ ಸೇವೆಗಳಿಲ್ಲ. ಇಲ್ಲಿ ಸಾರ್ವಜನಿಕರು ಖಾಸಗಿ ಬಸ್ಗಳನ್ನೇ ಅವಲಂಬಿಸಿ ಪ್ರಯಾಣ ಮಾಡುತ್ತಾರೆ. ಆದರೆ ಸರಕಾರದ ಉಚಿತ ಪ್ರಯಾಣ ಗ್ಯಾರಂಟಿ ಕೇವಲ ಸರಕಾರಿ ಬಸ್ ಗಳಿಗೆ ಸೀಮಿತವಾಗಿದ್ದು, ಇದರಿಂದ ಮೂರು ಜಿಲ್ಲೆಗಳ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಈ ಮೂರು ಜಿಲ್ಲೆಗಳಲ್ಲಿ ಖಾಸಗಿ ಬಸ್ ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ ಕಲ್ಪಿಸಬೇಕೆಂದು ಆಗ್ರಹಿಸಿದರು. ಗ್ಯಾರಂಟೀ ಜಾರಿಯಾಗೊಳಿಸುವ ವಿಚಾರವಾಗಿ ಸಿಎಂ ಸಿದ್ಧರಾಮಯ್ಯ ಜೂನ್ 1 ರಂದು ಅಧಿಕೃತವಾಗಿ ಘೋಷಿಸಲಿದ್ದು, ವಿ. ಸುನಿಲ್ ಕುಮಾರ್ ರವರ ಹೇಳಿಕೆಯನ್ನು ಪರಿಗಣಿಸುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.

ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್‌ರವರು, ಬಿಜೆಪಿಗೆ ಅಧಿಕಾರ ಕಳೆದುಕೊಂಡು ಹುಚ್ಚು ಹಿಡಿದಿದೆ. ಸರ್ಕಾರ ನಡೆಸಿದ ಅನುಭವ ಹೊಂದಿರುವ ಮಂತ್ರಿ, ಖಾಸಗಿಯಲ್ಲಿ ಸರಕಾರಿ ವ್ಯವಸ್ಥೆ ನೀಡಿಲು ಹೇಳುತ್ತಿದ್ದಾರೆ. ಸರಕಾರ ಕೆಎಸ್‌ಆರ್‌ಟಿಸಿ ಯನ್ನು ಉಚಿತವಾಗಿ ನಡೆಸುತ್ತಿಲ್ಲ. ಅದೊಂದು ಸಂಯುಕ್ತ ಸಂಸ್ಥೆಯಾಗಿದೆ. ಕೆಎಸ್‌ಆರ್‌ಟಿಸಿ ಗೆ ಕೊಟ್ಟಂತೆ ಅದರ ಪಾವತಿಯನ್ನು ಕೊಡುವುದಾದರೆ ಖಾಸಗಿ ಬಸ್ ಉಚಿತವಾಗುತ್ತದೆ. ತಮ್ಮ ಸರ್ಕಾರವಿರುವಾಗ ಖಾಸಗಿಗಳಿಗೆ ತೊಂದರೆ ಕೊಟ್ಟಿರುವ ಸುನಿಲ್ ಕುಮಾರ್ ರಿಂದ ಇಂತಹ ಹೇಳಿಕೆಗಳು ಅಗತ್ಯವಿಲ್ಲ. ಅವರು ಇಂತಹ ಬಾಲೀಶ ಹೇಳಿಕೆಗಳನ್ನು ಕೊಡುವುದು ನಿಲ್ಲಿಸಲಿ. ನಾವು ಹೇಳಿರುವುದಕ್ಕೆ ಬದ್ಧರಾಗಿ 5 ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ. ಸುನಿಲ್ ಕುಮಾರ್ ಅವರಿಗೆ ತಮ್ಮ ಇಲಾಖೆಯ ಬ್ರಷ್ಟಾಚಾರವನ್ನು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಸಿಒಡಿ ಮತ್ತು ಸಿಬಿಐ ಗೆ ಕೊಡುತ್ತೇವೆಂಬ ಭಯ ಶುರುವಾಗಿದೆ. ಇನ್ನೆರಡು ದಿನಗಳಲ್ಲಿ ಸುನಿಲ್ ಕುಮಾರ್ ಇಲಾಖೆಯ ಬ್ರಷ್ಟಾಚಾರವನ್ನು ಸಿಒಡಿ ಮತ್ತು ಸಿಬಿಐ ಗೆ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇವೆ. 40% ಮೀರಿದ ಬ್ರಷ್ಟಾಚಾರ ಬಿಜೆಪಿ ಸರ್ಕಾರದ್ದು. ಬ್ರಷ್ಟಾಚಾರ ಮಾಡದ ಇಲಾಖೆ ಬಜೆಪಿಯಲ್ಲಿ ಇರಲಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ಜನತೆ ನಮ್ಮ ಮೇಲೆ ನಂಬಿಕೆಯನ್ನಿಟ್ಟು ಕಾಂಗ್ರೆಸ್‌ನ್ನು ಆರಿಸಿದೆ. ಆರಿಸಿದ ಜನರಿಗೆ ನ್ಯಾಯ ಒದಗಿಸಬೇಕಾದರೆ ಬಿಜೆಪಿಯ ಸಮಸ್ತ ಬ್ರಷ್ಟಾಚಾರವನ್ನು ಬಯಲಿಗೆಳೆಯಬೇಕು. ಉಭಯ ಜಿಲ್ಲೆಗಳಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸುನಿಲ್ ಕುಮಾರ್ ಅವರು ಅಖಂಡವಾಗಿ ಬ್ರಷ್ಟಾಚಾರ ಮಾಡಿದ್ದಾರೆ. ಇವರೆಲ್ಲರ ಮೇಲೆ ಇಲಾಖಾವಾರು ತನಿಖೆ ನಡೆಸಬೇಕೆಂದು ತೀವ್ರವಾಗಿ ಆಗ್ರಹಿಸದರು.