V4STREAM OTT ಯಲ್ಲಿ “ನಸೀಬ್”- ಏರೆಗುಂಡು ಏರೆಗಿಜ್ಜಿ ತುಳು ಸಿನಿಮಾ ಬಿಡುಗಡೆ

ಮಂಗಳೂರು ಕ್ಯಾಮ್ ಫಿಲ್ಮ್ ಅರ್ಪಿಸುವ ಪ್ರೆಸ್ಟನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ತಯಾರಾದ ಹೆನ್ರಿ ಡಿಸಿಲ್ವ ನಿರ್ಮಿಸಿದ ಹ್ಯಾರಿ ಫೆರ್ನಾಂಡಿಸ್ ನಿರ್ದೇಶಿಸಿದ ನಶೀಬಾಚೊ ಖೆಳ್ ಕೊಂಕಣಿ ಚಲನಚಿತ್ರವು ಈಗ ನಸೀಬ್ ಏರೆಗುಂಡ ಏರೆಗಿಜ್ಜಿ ಹೆಸರಿನಲ್ಲಿ ತುಳು ಸಿನಿಮಾ ಆಗಿ ಡಬ್ಬಿಂಗ್ ಆಗಿದೆ. ಈ ತುಳು ಸಿನಿಮಾ ಸೆಪ್ಟಂಬರ್ 8ರಂದು ವಿ4 ಸ್ಟ್ರೀಮ್ ಬಿಡುಗಡೆಗೊಳ್ಳಲಿದೆ.
ಸುಮಾರು 35 ವರ್ಷಗಳ ಹಿಂದೆ ಹೆನ್ರಿ ಡಿ ಸಿಲ್ವರವರು ರಚಿಸಿದ ಕಾಜಾರಾಚೆ ಉತಾರ್ ಎಂಬ ನಾಟಕದ ಮೂಲ ಕಥೆಯನ್ನಾಧರಿಸಿ ಮತ್ತು ಇದನ್ನು ಆಧುನಿಕತೆಗೆ ಅನುಗುಣವಾಗಿ ಚಲನಚಿತ್ರವಾಗಿ ತೆರೆ ಕಂಡಿದೆ. ದೇವರು ಪ್ರತಿಯೊಬ್ಬನಿಗೆ ಅವನ ಬದುಕಿಗಾಗಿ ವಿವಿಧ ಕಲೆಗಳನ್ನು ನೀಡಿರುತ್ತಾನೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವುದು ನಮ್ಮೆಲ್ಲರ ಹೊಣೆಯಾಗಿದೆ.
ಹ್ಯಾರಿ ಫೆರ್ನಾಂಡಿಸ್ ನಿರ್ದೇಶಿಸಿ ಈ ಚಲನಚಿತ್ರಕ್ಕೆ ಶಕ್ತಿ ನಗರದ ಕಲಾಂಗಣ, ಬಲ್ಮಠ, ಬೊಂದೇಲ್, ಉಡುಪಿ ಜಿಲ್ಲೆಯ ಬಾರ್ಕೂರ್, ಸಾಸ್ತಾನದಲ್ಲಿ ಚಿತ್ರೀಕರಣಗೊಂಡಿದೆ. ಉತ್ತಮ ಹಾಸ್ಯ ಮತ್ತು ಉತ್ತಮ ಕಥಾ ಹಂದರವನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ಎಲ್ಬೆನ್ ಮಸ್ಕರೇನಸ್, ಎಸ್ತೇರ್, ನೊರೊನ್ಹಾ, ರಂಜಿತ ಊವಿಸ್ ಸಾಸ್ತಾನ, ಪ್ರಿನ್ಸ್ ಜಾಕೋಬ್, ಗೋವಾ, ಸ್ಟೇನಿ ಆಲ್ಬಾಂಸ್, ಸುಜಾತ ಅಂದ್ರಾದೆ, ಗ್ಯಾಲ್ವಿನ್ ಫೆರ್ನಾಂಡಿಸ್ ಮೊದಲಾದವರಿದ್ದಾರೆ.

ಈ ಸಿನಿಮಾ ಕೊಂಕಣಿಯಲ್ಲಿ 2016ರಲ್ಲಿ ನಶೀಬಾಚೊ ಖೆಳ್ ಎಂಬುದಾಗಿ ಕೊಂಕಣಿಯಲ್ಲಿ ತೆರೆಕಂಡಿದೆ. ಸುಮಾರು 2 ಲಕ್ಷ ಕೊಂಕಣಿಗರು ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ಕೆನಡಾ, ಅಮೆರಿಕಾ, ಆಸ್ಟ್ರೇಲಿಯಾ, ಲಂಡನ್, ಇಸ್ರೇಲ್ ಮೊದಲಾದ ದೇಶಗಳಲ್ಲಿ ಸಿನಿಮಾ ತೆರೆ ಕಂಡಿದೆ. ಈಗ ತುಳುವಿಗೆ ಈ ಸಿನಿಮಾ ಡಬ್ ಆಗಿ ನಸೀಬ್ ಏರೆಗುಂಡು ಏರೆಗಿಜ್ಜಿ ಹೆಸರಿನಲ್ಲಿ ತೆರೆಕಾಣುತ್ತಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

 

Related Posts

Leave a Reply

Your email address will not be published.