ವಿ4 ನ್ಯೂಸ್‌ಗೆ 19ನೇ ವಾರ್ಷಿಕೋತ್ಸವದ ಸಂಭ್ರಮ

ಸುದ್ದಿ ಮತ್ತು ಮನೋರಂಜನಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ವಿ4 ನ್ಯೂಸ್‌ಗೆ 19ನೇ ವರ್ಷದ ಸಂಭ್ರಮ. ನಗರದ ಯೆಯ್ಯಾಡಿಯಲ್ಲಿರುವ ವಿ4 ನ್ಯೂಸ್ ಸ್ಟುಡಿಯೋದಲ್ಲಿ ಕೇಕ್ ಕತ್ತರಿಸಿ ಸಂಭ್ರಮದಿಂದ ವಾರ್ಷಿಕೋತ್ಸವನ್ನು ಆಚರಿಸಲಾಯಿತು.

ಕರಾವಳಿ ಕರ್ನಾಟಕದ ಜನಪ್ರೀಯ ಚಾನೆಲ್ ಆಗಿ ಹೊರಹೊಮ್ಮಿರುವ ವಿ4 ನ್ಯೂಸ್ ಕರಾವಳಿಯ ಸುದ್ದಿಗಳು ಮಾತ್ರವಲ್ಲದೆ ರಾಜ್ಯ, ರಾಷ್ಟ್ರೀಯ ಅಂತರರಾಷ್ಟ್ರೀಯ ಸುದ್ದಿಗಳನ್ನು ಭಿತ್ತರಿಸುವುದರ ಜೊತೆಗೆ, ಕಾಮಿಡಿ ಪ್ರೀಮಿಯರ್ ಲೀಗ್ ರಿಯಾಲಿಟಿ ಶೋ ಸೇರಿದಂತೆ ಅನೇಕ ಮನೋರಂಜನಾ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ನೀಡುತ್ತಾ ಬಂದಿದೆ.

ಇದೀಗ ವಿ4 ನ್ಯೂಸ್ ಸುದೀರ್ಘ ಪಯಣದಲ್ಲಿದ್ದು, 19ನೇ ವಾರ್ಷಿಕೋತ್ಸವದ ಪ್ರಯುಕ್ತ ಯೆಯ್ಯಾಡಿಯ ವಿ4 ನ್ಯೂಸ್ ಸ್ಟುಡಿಯೋದಲ್ಲಿ ಕೇಕ್ ಕತ್ತರಿಸಿ ಸಂಭ್ರಮದಿಂದ ಆಚರಿಸಲಾಯಿತು.
ಇದೇ ವೇಳೆಯಲ್ಲಿ ನಟ ವಿಜೆ ವಿನೀತ್ ನಟನೆಯ ರಾಹುಲ್ ಅಮೀನ್ ನಿರ್ದೇಶನದ ಮಿಡಲ್ ಕ್ಲಾಸ್ ಫ್ಯಾಮಿಲಿ ತುಳು ಸಿನಿಮಾದ ಪೋಸ್ಟರನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ವಿ4 ನ್ಯೂಸ್‌ನ ಆಡಳಿತ ನಿರ್ದೇಶಕರಾದ ಲಕ್ಷ್ಮಣ್ ಕುಂದರ್, ಉಪಾಧ್ಯಕ್ಷರಾದ ರೋಸ್ಲೀನ್ ಡಿಲೀಮಾ, ಮಾರ್ಕೆಟಿಂಗ್ ವಿಭಾಗದ ಮ್ಯಾನೇಜರ್ ಮಾಣಿಕ್, ಪ್ರಧಾನ ಸಂಪಾದಕರಾದ ಪೇರೂರು ಜಾರು, ನಟ ವಿಜೆ ವಿನೀತ್, ಸುಳ್ಯದ ವರದಿಗಾರ ಪುಷ್ಪರಾಜ್ ಶೆಟ್ಟಿ, ಕುಂದಾಪುರ ಮಾರ್ಕೆಟಿಂಗ್ ವಿಭಾಗದ ರವಿರಾಜ್ ಸೇರಿದಂತೆ ವಿ4 ನ್ಯೂಸ್‌ನ ಸಿಬ್ಬಂದಿ ವರ್ಗದವರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

add - tandoor .

Related Posts

Leave a Reply

Your email address will not be published.