ಲಕ್ಷ್ಮೀಗೆ ವಿಶೇಷ ದಿನ : ವರ ಮಹಾಲಕ್ಷ್ಮೀ ವ್ರತ

ವರಲಕ್ಷ್ಮೀ ವ್ರತ ಎಂದು ಶ್ರಾವಣ ಮಾಸದಲ್ಲಿ ಲಕ್ಷ್ಮೀ ಪೂಜೆ ಮಾಡುತ್ತಾರೆ. ಸಂಸ್ಕೃತದಲ್ಲಿ ಒಂದು ಶಬ್ದದ ಮುಂದೆ ಬರುವ ಇನ್ನೊಂದು ಶಬ್ದದ ಆಧಾರದಲ್ಲಿ ಅರ್ಥ ಕಲ್ಪನೆಯಾಗುತ್ತದೆ. ವರ ಎಂಬ ಶಬ್ದಕ್ಕೆ ಅನೇಕ ಅರ್ಥಗಳಿವೆ. ವಧುವಿಗೆ ವರ, ವರದಾನ ಇತ್ಯಾದಿ ಶಬ್ದ ಪ್ರಯೋಗಗಳಲ್ಲಿ ವಿವಿಧ ಅರ್ಥ ಕಲ್ಪನೆ ಬರುತ್ತದೆ. ಇಲ್ಲಿ ವರ ಶಬ್ದದ ಅನಂತರ ಲಕ್ಷ್ಮೀ ಬಂದಿದ್ದಾಳೆ. ಅಂದರೆ ಹೇ ಲಕ್ಷ್ಮೀಯೇ ಸಂತೃಪ್ತಿಯನ್ನು ನೀಡು. ನೆಮ್ಮದಿಯನ್ನು ನೀಡು ಎಂಬುದಾಗಿದೆ. ಶ್ರೀಮನ್ನಾ ರಾಯಣನ ಅರ್ಧಾಂಗಿಯೇ ಸಂತೃಪ್ತಿಯನ್ನು ನೀಡುವವಳು. ಹಾಗಾಗಿ ಲಕ್ಷ್ಮೀ ನಾರಾಯಣ ಎಂದರು.

ವರಲಕ್ಷ್ಮೀ ಪೂಜೆಯನ್ನು ಕಲೋಕ್ತವಾಗಿ ಕಲಶದಲ್ಲಿ ಆವಾಹಿಸಿ ಪೂಜೆ ಮಾಡಬಹುದು. ಭಕ್ತಿ, ಶ್ರದ್ಧೆಯಿಂದ ಚಿತ್ರಪಟಗಳಲ್ಲೋ ಬಿಂಬ ಗಳಲ್ಲೋ ಲಕ್ಷ್ಮೀಯನ್ನು ಭಜನೆಯ ಮೂಲಕವೂ ಆರಾಧಿಸಿ ನಾವು ತೃಪ್ತರಾದರೆ ಅದುವೇ ಪೂರ್ಣ ಸಂತೃಪ್ತಿ, ನೆಮ್ಮದಿ, ನೆಮ್ಮದಿಯೇ ಆಯು ರಾರೋಗ್ಯದ ಮೂಲ ಗುಟ್ಟು. ಲಕ್ಷ್ಮೀಗೆ ಪ್ರಿಯವಾದದ್ದು ಕಲ್ಲು ಸಕ್ಕರೆಯುಕ್ತವಾದ ಕ್ಷೀರ, ಇದನ್ನು ಸಮರ್ಪಿಸಲೇ ಬೇಕು. ಸುಮಂಗಲಿಗೆ ಏನೇನು ಸೌಭಾಗ್ಯವೋ, ಅಂತಹ ಮಾಡಬೇಕಾದರೆ – ಅಲಂಕಾರದಿಂದ ಲಕ್ಷ್ಮೀಯನ್ನು ವರ ಲಕ್ಷ್ಮೀಯಾಗಿ ಶ್ರಾವಣ ಅದೇ ರೀತಿ ನಾವು ಶುಕ್ರವಾರದಂದು ಆರಾಧಿಸಿ ಸಂತೃಪ್ತಿ ಯನ್ನು ಪಡೆಯೋಣ.