ಮಂಗಳೂರು- ರಾಷ್ಟ್ರೀಯ ಶಿಕ್ಷಣ ನೀತಿ : ವಿಚಾರ ಸಂಕಿರಣ

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಒಳಿತಾಗುವುದೇ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ಮಂಗಳೂರಿನ ಬಲ್ಮಠ ಸಹೋದಯ ಸಭಾಂಗಣದಲ್ಲಿ ಭಾನುವಾರ ನಡೆಯಿತು.ಅಖಿಲ ಭಾರತ ಯುಜನ ಒಕ್ಕೂಟ , ಸಮದರ್ಶಿ ವೇದಿಕೆ , ಕರ್ನಾಟಕ ಥಿಯೋಲಾಜಿಕಲ್ ರಿಸರ್ಜ್ ಇನ್ಸಿಟ್ಯೂಟ್ ಸಹಯೋUದÀಲ್ಲಿ ವಿಚಾರಗೋಷ್ಠಿಯನ್ನು ನಡೆಯಿತು. ಹೊಸತು ಪತ್ರಿಕೆಯ ಸಂಪಾದಕ ಡಾ.ಸಿದ್ಧನಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯನ್ನು ಕೆ.ಟಿ.ಸಿ ಪ್ರಾಂಶುಪಾಲ ಪ್ರೊ.ಎಚ್.ಎಂ. ವಾಟ್ಸನ್ ಅವರು ಉದ್ಘಾಟಿಸಿದರು.

ವಿಚಾರಗೋಷ್ಠಿ ಪ್ರಧಾನ ಉಪನ್ಯಾಸ ಕಾರ್ಯಕ್ರಮದಲ್ಲಿ ಜೆ.ಎನ್.ಯು. ನಿವೃತ್ತ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ , ಶಿಕ್ಷಣ ತಜ್ನರಾದ ಡಾ. ನಿರಂಜನಾರಾಧ್ಯ , ಡಾ.ಸುಕುಮಾರ ಗೌಡ , ಖ್ಯಾತ ವೈದ್ಯ ಡಾ.ಬಿ. ಶ್ರೀನಿವಾಸ ಕಕ್ಕಿಲ್ಲಾಯ ಅವರು ವಿಚಾರ ಮಂಡಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು, ಶಿಕ್ಷಕರು, ಶಿಕ್ಷಣ ಕಾರ್ಯಕರ್ತರು ಭಾಗವಹಿಸಿದರು. ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರ್ವಹಿಸಿದರು.