ಭಕ್ತಿಗೀತೆಯ ಮೂಲಕ ಉಚ್ಚಿಲ ದೇವಿಯ ದರುಶನ ಪಡೆದ ಶ್ರೀ ವಿದ್ಯಾಭೂಷಣ್
ಕರಾವಳಿ ತಡಿಯ ಪ್ರಸಿದ್ಧ ಲಕ್ಷ್ಮೀ ದೇವಿಯ ದೇವಸ್ಥಾನ ಹಾಗೂ ಮೊಗವೀರ ಸಮಾಜದ ಕುಲದೇವತೆಯಾದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ವಿದ್ವಾನ್ ಶ್ರೀ ವಿದ್ಯಾಭೂಷಣರು ಭೇಟಿ ನೀಡಿದರು. ಇದೇ ವೇಳೆ ಅವರು ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡನ್ನು ಹಾಡಿ ಶ್ರೀ ದೇವಿಯ ದರ್ಶನವನ್ನು ಪಡೆದರು.