ಡಿ.16ರಂದು ವಿಐಪಿಸ್ ಲಾಸ್ಟ್ ಬೆಂಚ್ ಸಿನಿಮಾ ರಿಲೀಸ್ : ಡಿ.10 ಪಣಂಬೂರು ಕಡಲ ಕಿನಾರೆಯಲ್ಲಿ ಪ್ರಮೋಷನ್

ಎ.ಎಸ್. ಪ್ರೋಡಕ್ಷನ್ ಅಡಿಯಲ್ಲಿ ತಯಾರಾದ ಅದ್ಧೂರಿ ತುಳು ಚಲನಚಿತ್ರ ವಿಐಪಿಸ್ ಲಾಸ್ಟ್ ಬೆಂಚ್ ಇದರ ಪ್ರೊಮೋಷನ್ ಕಾರ್ಯಕ್ರಮ ನಡೆಯಲಿದ್ದು, ಇದರ ಜೊತೆಗೆ ಡಾ. ಶಿವರಾಜ್‍ಕುಮಾರ್ ನಟನೆಯ ವೇದ ಸಿನಿಮಾದ ಪ್ರೀ ರಿಲೀಸ್ ಈವೆಂಟ್‍ನ ಅದ್ಧೂರಿ ಮನೋರಂಜನಾ ಕಾರ್ಯಕ್ರಮ ಡಿಸೆಂಬರ್ 10ರಂದು ಮಂಗಳೂರಿನ ಕಡಲ ಕಿನಾರೆಯಲ್ಲಿ ನಡೆಯಲಿದೆ ಎಂದು ಎ. ಎಸ್ ಪ್ರೊಡಕ್ಷನ್‍ನ ಎಕ್ಸಿಕ್ಯುಟಿವ್ ಪ್ರೋಡ್ಯೂಸರ್ ಕಿಶೋರ್ ಹೇಳಿದರು.

ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ನಡೆಸಿ ಮಾತನಾಡಿ, ಡಿಸೆಂಬರ್ 10ರಂದು ಸಂಜೆ 6 ಗಂಟೆಗೆ ಪಣಂಬೂರು ಬೀಚ್‍ನಲ್ಲಿ ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಡಾ. ಶಿವರಾಜ್‍ಕುಮಾರ್ ಅಭಿನಯದ 125ನೇ ಚಲನಚಿತ್ರ ವೇದ ಸಿನಿಮಾದ ಗ್ರ್ಯಾಂಡ್ ಪ್ರಮೋಷನ್ ಈವೆಂಟ್ ನಡೆಯಲಿರುವುದು ಈ ಕಾರ್ಯಕ್ರಮಕ್ಕೆ ಕರುನಾಡ ಚಕ್ರವರ್ತಿ ಡಾ. ಶಿವರಾಜ್‍ಕುಮಾರ ಅವರು ಅಗಮಿಸಲಿದ್ದು, ಅವರ ಜೊತೆ ಸಿನಿಮಾದ ನಾಯಕಿ ಆಗಿರುವಂತಹ ಗಾನವಿ ಲಕ್ಷ್ಮಣ್ ಹಾಗೂ ಚಿತ್ರ ತಂಡದ ಕಲಾವಿದರು ಭಾಗವಹಿಸಲಿದ್ದಾರೆ. ವಿಐಪಿಸ್ ಲಾಸ್ಟ್ ಬೆಂಚ್ ತುಳು ಸಿನಿಮಾ ಡಿಸೆಂಬರ್ 16ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಮೋಷನ್ ಕೋಸ್ಟಲ್‍ವುಡ್ ನೈಟ್ಸ್ ಎಂಬ ಹೆಸರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಲೈನ್ ಕಾನ್ಸರ್ಟ್ ಮತ್ತು ವೈವಿದ್ಯಮಯ ನೃತ್ಯ ಕಾರ್ಯಕ್ರಮಗಳು, ಕಾಮಿಡಿ, ಫನ್ ಗೇಮ್ಸ್ ಮುಂತಾದ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದ್ದು, ಕಲಾಭಿಮಾನಿಗಳಿಗೆ ಉಚಿತ ಪ್ರವೇಶ ಇರಲಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಸೃಜತ್ ತೇಜಾವರ್, ಮುರಳಿ ಪಿಕ್ಸ್‍ಆರ್ಟ್, ಡೆನ್ಸನ್ ಪಿಂಟೋ ಉಪಸ್ಥಿತರಿದ್ದರು.