ಹಲವು ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ
ಭಾರತ ಸರಕಾರದ ನೆಹರು ಯುವ ಕೇಂದ್ರ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ, ಪೂಜಾ ಎರೇಂಜರ್ಸ್ ಮತ್ತು ಪೂಜಾ ಫ್ರೆಂಡ್ಸ್ ಹಳೆಯಂಗಡಿ, ಗ್ರಾಮ ಪಂಚಾಯತ್ ಪಡುಪಣಂಬೂರು, ಶ್ರೀ ಓಂಕಾರೇಶ್ವರಿ ಮಂದಿರ ತೋಕೂರು ಇದರ ಜಂಟಿ ಆಶ್ರಯದಲ್ಲಿ ಫೇಮಸ್ ಯೂತ್ ಕ್ಲಬ್ ಮತ್ತು ಮಹಿಳಾ ಮಂಡಲ 10ನೇ ತೋಕೂರು, ಹಳೆಯಂಗಡಿ ಪ್ರಾಯೋಜಕತ್ವದಲ್ಲಿ, ವಿಶ್ವ ಪರಿಸರ ದಿನಾಚರಣೆಯನ್ನು ಸಂಸ್ಥೆಯ ಕಾರ್ಯಾಲಯದಲ್ಲಿ ನೆರವೇರಿಸಲಾಯಿತು.ಸಂಸ್ಥೆಯ ಗೌರವಾಧ್ಯಕ್ಷರಾದ ಗುರುರಾಜ ಪೂಜಾರಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಶ್ರೀ ಓಂಕಾರೇಶ್ವರಿ ಮಂದಿರ 10ನೇ ತೋಕೂರು ಅಧ್ಯಕ್ಷರಾದ ಸದಾಶಿವ ಕುಂದರ್, ಯಕ್ಷ ದೇಗುಲ ಹತ್ತು ಸಮಸ್ತರು 10ನೇ ತೋಕೂರು ಇದರ ನಿಕಟ ಪೂರ್ವ ಅಧ್ಯಕ್ಷರಾದ ಸುರೇಶ ಬಿ ದೇವಾಡಿಗ, ಫೇಮಸ್ ಯೂತ್ ಕ್ಲಬ್ಬಿನ ಅಧ್ಯಕ್ಷರಾದ ಭಾಸ್ಕರ್ ಅಮೀನ್ ತೋಕೂರು, ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ಯೋಗೀಶ್, ರೋಟರಿ ಸಮುದಾಯದಳದ ಅಧ್ಯಕ್ಷರಾದ ಮೋಹನ್ ದಾಸ್ ದೇವಾಡಿಗ ಉಪಸ್ಥಿತರಿದ್ದರು.ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಭಾಗವಹಿಸಿದ ಎಲ್ಲರಿಗೂ ಹಣ್ಣು ಹಂಪಲುಗಳ ಗಿಡವನ್ನು ಉಚಿತವಾಗಿ ನೀಡಲಾಯಿತು.ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ಹಿಮಕರ್ ರವರು ನಿರೂಪಿಸಿದರು, ಮಹಮ್ಮದ್ ಶರೀಫ್ ರವರು ಧನ್ಯವಾದವನ್ನು ಅರ್ಪಿಸಿದರು.