ರಸ್ತೆ ಬದಿಯ ಹುಲ್ಲು, ಮರದ ಗೆಲ್ಲು ತೆರವು : ಯುವಕೇಸರಿ ಅಬೀರಿ ಸ್ವಚ್ಛತಾ ಶ್ರಮದಾನ

ವಿಟ್ಲ: ಯುವಕೇಸರಿ ಅಬೀರಿ ಅತಿಕಾರಬೈಲು ಚಂದಳಿಕೆ ಸಂಘಟನೆಯ ವತಿಯಿಂದ ಶ್ರಮದಾನ ನಡೆಯಿತು. ಅತಿಕಾರಬೈಲುವಿನಿಂದ ಚಂದಳಿಕೆ ಜಂಕ್ಷನ್ ವರೆಗೆ ಸುಮಾರು 2 ಕಿಲೋ ಮೀಟರ್ ದೂರದ ರಸ್ತೆಯ ಬದಿಯ ಹುಲ್ಲು ಮತ್ತು ಮರದ ಗೆಲ್ಲುಗಳನ್ನು ತೆರವುಗೊಳಿಸುವ ಸ್ವಚ್ಚತಾ ಶ್ರಮದಾನ ನಡೆಯಿತು. ಯುವಕೇಸರಿಯ 40 ಕಿಂತಲೂ ಹೆಚ್ಚು ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದ್ದರು. ವಿವಿಧ ಗ್ರಾಮ ಪಂಚಾಯತ್ ಸದಸ್ಯರು ಈ ಕಾರ್ಯಕ್ಕೆ ಸಾಥ್ ನೀಡಿದರು. ಈ ಸಂಧರ್ಭದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ನ ಸದಸ್ಯೆಯಾದ ರಕ್ಷಿತಾ ಸನತ್ ಚಂದಳಿಕೆ ಮತ್ತು ವಿಟ್ಲ ಮೂಡ್ನೂರು ಗ್ರಾಮ ಪಂಚಾಯತ್ ನ ಸದಸ್ಯರಾದ ಉಮೇಶ್ ಅರ್ಕಲ್ ತೋಟ ಮತ್ತು ರೋಹಿಣಿ ಹೊಯ್ಗೆಮನೆ ಹಾಗೂ ಯುವಕೇಸರಿಯ ಅಧ್ಯಕ್ಷರು ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.