ವಿಟ್ಲ :ಕಬಕ-ವಿಟ್ಲ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ವಿಟ್ಲ: ನಾನು ಇದೇ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಿ, ಗೆದ್ದು ಶಾಸಕಿಯಾಗಿ ಹಿಂದಿನ ಅವಧಿಯಲ್ಲಿ ಮಂಜೂರುಗೊಳಿಸಿದ್ದ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ತೋರಿಸಿಕೊಡುವುದಾಗಿ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಹೇಳಿದ್ದಾರೆ.

ಕಬಕ-ವಿಟ್ಲ ರಸ್ತೆ ದುರಸ್ತಿಗೆ ಆಗ್ರಹಿಸಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮತ್ತು ಕಬಕ ವಲಯ ಕಾಂಗ್ರೆಸ್‌ನ ಆಶ್ರಯದಲ್ಲಿ ಕಬಕದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೆಶಿಸಿ ಅವರು ಮಾತನಾಡಿದರು.ಕಳೆದ ಅವಧಿಯಲ್ಲಿ ನಾನು ಮೆಡಿಕಲ್ ಕಾಲೇಜಿಗೆ 40 ಎಕ್ರೆ ಜಮೀನು ನೀಡಿದ್ದರೂ ಈಗಿನ ಶಾಸಕರು ಮೆಡಿಕಲ್ ಕಾಲೇಜು ಮಾಡುವ ಬದಲು ಮೀನು ವ್ಯಾಪಾರಕ್ಕೆ ಮುಂದಾಗಿದ್ದಾರೆ. ಇದಕ್ಕೆ ಎಲ್ಲಾ ವೈದ್ಯರುಗಳ ವಿರೋಧವಿದ್ದೂ ಕೈ ಬಿಟ್ಟಿದ್ದು ಜಾಗ ಉಳಿದಿದೆ.
ಕೈ ಬಿಟ್ಟಿದ್ದು ಜಾಗ ಉಳಿದಿದೆ. ಶಾಸಕಿಯಾಗಿ ನನ್ನ ಪ್ರಥಮ ಅವಧಿಯಲ್ಲಿ ದ.ಕ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಪುತ್ತೂರಿಗೆ ಮಿನಿ ವಿಧಾನ ಸೌಧ ಮಂಜೂರುಗೊಳಿಸಿರುವುದಲ್ಲದೆ ನಂತರದ ನನ್ನ ಅವಧಿಯಲ್ಲಿಯೇ ಅದು ಪೂರ್ಣಗೊಂಡಿದೆ. ಕಳೆದ ಅವಧಿಯಲ್ಲಿ ನಾನು ಮಹಿಳಾ ಪದವಿ ಕಾಲೇಜಿಗೆ ರೂ.7 ಕೋಟಿ ಮಂಜೂರುಗೊಳಿಸಿದ್ದು ಅದಕ್ಕೆ ಇನ್ನೂ ಕಲ್ಲು ಹಾಕುವ ಕೆಲಸವಾಗಿಲ್ಲ ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಬಿಜೆಪಿಯವರು ಆಡಳಿತಕ್ಕೆ ಬಂದ ಬಳಿಕ ಯಾವುದು ಅಭಿವೃದ್ಧಿಯಾಗಿದೆ ಎಂಬುದನ್ನು ಪ್ರಶ್ನಿಸುವಂತಾಗಿದೆ.ಪ್ರಮುಖ ಅಭಿವೃದ್ಧಿ ಕೆಲಸಗಳು ಕಾಣುತ್ತಿಲ್ಲ.ಶಾಲಾ ಕೊಠಡಿ ಮಾಡಿಲ್ಲ. ಸಣ್ಣಪುಟ್ಟ ರಸ್ತೆಗಳನ್ನು ಮಾತ್ರ ಮಾಡುತ್ತಾರೆ.ಕಮಿಷನ್ ನುಂಗುವ ಉದ್ದೇಶಕ್ಕೆ ಕಾಮಗಾರಿಗಳನ್ನು ಕೆಆರ್‌ಡಿಸಿಎಲ್‌ಗೆ ನೀಡುತ್ತಾರೆ.ಅಲ್ಲಿ ಶಾಸಕರೇ ಗುತ್ತಿಗೆದಾರರನ್ನು ಕರೆದುಕೊಂಡು ಹೋಗಿ ಪರ್ಸಂಟೇಜ್ ಪಡೆದು ಟೆಂಡರ್ ಮಾಡದೇ ನೇರವಾಗಿ ಗುತ್ತಿಗೆ ನೀಡಲಾಗುತ್ತದೆ ಎಂದರು.
\

ವಿಟ್ಲ-ಉಪ್ಪಿನoಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ, ಭಾರತ್ ಜೋಡೋ ಸಂಯೋಜಕರಾದ ಚಂದ್ರಹಾಸ ರೈ, ಪುತ್ತೂರು ಬ್ಲಾಕ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ, ಕೆ. ಪಿ. ಸಿ. ಸಿ ವಕ್ತಾರ ಅಮಲ ರಾಮಚಂದ್ರ ಭಟ್, ಕಾಂಗ್ರೆಸ್ ಮುಖಂಡೆ ದಿವ್ಯಾ ಪ್ರಭಾ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಳಾದ ಸುಬ್ರಹ್ಮಣ್ಯ ಗೌಡ ಹನಿಯೂರು, ಜಗನ್ನಾಥ ಶೆಟ್ಟಿ ಕೋಡಿಂಬಾಡಿ, ಜಿ.ಪಂ ಮಾಜಿ ಅಧ್ಯಕ್ಷ ಸೋಮನಾಥ ಉಪ್ಪಿನಂಗಡಿ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.