ವಿಟ್ಲ: ಕೆಎಸ್ಆರ್ ಟಿಸಿ ಬಸ್‍ನಿಂದ ಎಸೆಯಲ್ಪಟ್ಟ ಪ್ರಯಾಣಿಕ ಗಂಭೀರ

ವಿಟ್ಲ : ಪೆರುವಾಯಿ ಗ್ರಾಮದ ಕೆದುವಾರು ಎಂಬಲ್ಲಿ ಕೆಎಸ್ ಆರ್ ಟಿಸಿ ಬಸ್ಸಿನಿಂದ ಎಸೆಯಲ್ಪಟ್ಟು ಪ್ರಯಾಣಿಕ ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ. ಕೆದುವಾರು ನಿವಾಸಿ ಇನಾಸ್ ಡಿ ಸೋಜಾ ಗಾಯಗೊಂಡವರು. ಅವರು ಸೆ.15ರಂದು ವಿಟ್ಲ ಪೇಟೆಯಿಂದ ಆಗತ್ಯ ಕೆಲಸ ಮುಗಿಸಿ ವಿಟ್ಲ ಪಕಳಕುಂಜ ಕೆ ಎಸ್ ಆರ್ ಟಿ ಸಿ ಬಸ್ಸಲ್ಲಿ ಪ್ರಯಾಣಿಕನಾಗಿ ವಿಟ್ಲದಿಂದ ಹೊರಟು ಕೆದುವಾರು ಎಂಬಲ್ಲಿಗೆ ಸುಮಾರು 12.25 ಗಂಟೆ ಸಮಯಕ್ಕೆ ತಲುಪುವ ವೇಳೆ ಬಸ್ ಸ್ಟಾಪ್ ನಲ್ಲಿ ಇಳಿಯಲು ಎದ್ದು ನಿಂತಾಗ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನು ತಿರುವು ರಸ್ತೆಯಲ್ಲಿ ಒಮ್ಮೆಲೇ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಬಸ್ಸನ್ನು ಚಲಾಯಿಸಿದ್ದರಿಂದ ಬಸ್ಸಿನ ಹಿಂಬದಿಯ ಬಾಗಿಲಿನಿಂದ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ಗಾಯವಾಗಿದೆ. ಇನಾಸ್ ಡಿಸೋಜಾ ಅವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

Related Posts

Leave a Reply

Your email address will not be published.