ವಿಟ್ಲ ಲಯನ್ಸ್ ಕ್ಲಬ್ ಪದಾಧಿಕಾರಿಗಳ ನೂತನ ಅಧ್ಯಕ್ಷರಾಗಿ ರಜಿತ್ ಆಳ್ವ ಎರ್ಮೆನಿಲೆ ಪದಗ್ರಹಣ

ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ 2024-25ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಟ್ಲದ ಲಯನ್ಸ್ ಸೇವಾ ಭವನದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ರಜಿತ್ ಆಳ್ವ ಎರ್ಮೆನಿಲೆ, ಕಾರ್ಯದರ್ಶಿಯಾಗಿ ಅರವಿಂದ ರೈ ಮೂರ್ಜೆಬೆಟ್ಟು, ಕೋಶಾಧಿಕಾರಿಯಾಗಿ ಮನೋಜ್ ಕುಮಾರ್ ರೈ ಮತ್ತು ಪದಾಧಿಕಾರಿಗಳಿಗೆ ಲಯನ್ಸ್ ಪ್ರಥಮ ಉಪರಾಜ್ಯಪಾಲ ಕುಡುಪಿ ಅರವಿಂದ ಶೆಣೈ ಅವರು ಪದಗ್ರಹಣ ನಡೆಸಿಕೊಟ್ಟರು.ಬಳಿಕ ಮಾತನಾಡಿದ ಅವರು ವಿಟ್ಲ ಲಯನ್ಸ್ ಕ್ಲಬ್ ಜಿಲ್ಲೆಯಲ್ಲಿಯೇ ಉತ್ತಮ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಶ್ಲಾಘನೀಯವಾಗಿದೆ ಎಂದರು.
ನೂತನ ಅಧ್ಯಕ್ಷ ರಜಿತ್ ಆಳ್ವ ಎರ್ಮೆನಿಲೆ ಮಾತನಾಡಿ ಲಯನ್ಸ್ ಕ್ಲಬ್ ಎಲ್ಲ ಸದಸ್ಯರ ಸಹಕಾರದಲ್ಲಿ ವಿಟ್ಲ ಲಯನ್ಸ್ ಕ್ಲಬ್ ಅನ್ನು ಮುನ್ನಡೆಸುತ್ತೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ವಿಟ್ಲ ಲಯನ್ಸ್ ಕ್ಲಬ್‌ನ ಸ್ಥಾಪನಾ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಜಿಲ್ಲಾ ಸಂಸದೀಯ ಕಾರ್ಯದರ್ಶಿ ಗೀತಾರಾವ್ ಅವರು ಹಿರಿಯ ಸ್ಥಾಪಕ ಸದಸ್ಯ ಸಿ.ವಿ ಗೋಪಾಲಕೃಷ್ಣ ಅವರನ್ನು ಗೌರವಿಸಿದರು. ನಿಕಟಪೂರ್ವ ಮಲ್ಟಿಪಲ್ ಚೇರ್ ಮೆನ್ ವಸಂತ ಶೆಟ್ಟಿ ಮತ್ತು ಪೂರ್ವ ರಾಜ್ಯಪಾಲ ಡಾ.ಗೀತಾಪ್ರಕಾಶ್ ಶುಭ ಹಾರೈಸಿದರು.
ಪ್ರಾಂತೀಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇಂಞಸ್, ಲಯನ್ಸ್ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷೆ ಜಲಜಾಕ್ಷಿ ಬಾಲಕೃಷ್ಣ ಗೌಡ, ಕಾರ್ಯದರ್ಶಿ ಪುಷ್ಪಲತಾ, ಕೋಶಾಧಿಕಾರಿ ಮುರಳಿ ಪ್ರಸಾದ್, ಪ್ರಮುಖರಾದ ವಿನ್ನಿ ಮಸ್ಕರೇಂಞಸ್, ಸುದೇಶ್ ಭಂಡಾರಿ ಎರ್ಮೆನಿಲೆ, ಯೂಜಿನ್ ಲೊಬೊ, ಲಿಯೋ ಅಧ್ಯಕ್ಷ ಮೋನಿಸ್, ಕಾರ್ಯದರ್ಶಿ ಜಿತಿನ್ ಕೃಷ್ಣ, ಕೋಶಾಧಿಕಾರಿ ದಯಾಳ್ ಮೊದಲಾದವರು ಉಪಸ್ಥಿತರಿದ್ದರು.
ಮೊಹಮ್ಮದ್ ಇಕ್ಬಾಲ್ ಹಾನೆಸ್ಟ್, ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ, ಮಂಗೇಶ್ ಭಟ್, ಅಂತೋನಿ ಲೊಬೊ, ಬಾಲಕೃಷ್ಣ ಗೌಡ, ದೇವಿಪ್ರಸಾದ್ ಶೆಟ್ಟಿ, ಡೇವಿಡ್ ವಿವಿಧ ಜವಾಬ್ದಾರಿ ನಿಭಾಯಿಸಿದರು.
