ವಿಟ್ಲ :ಶಿಥಿಲಾವಸ್ಥೆಯಲ್ಲಿ ಕುಳಾಲು ಸರ್ಕಾರಿ ಶಾಲೆಯ ಕಟ್ಟಡ-ಕುಸಿಯುವ ಹಂತದಲ್ಲಿರುವ ನಾಲ್ಕು ಕೊಠಡಿಗಳು -ಶಾಸಕರಿಗೆ ಮನವಿ ನೀಡಿದರೂ ಸ್ಪಂದಿಸಿಲ್ಲ
ವಿಟ್ಲ : ಶಿಕ್ಷಣ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ÷್ಯದಿಂದಾಗಿ 92ವರ್ಷಗಳ ಇತಿಹಾಸ ಹೊಂದಿದ ಕುಳಾಲು ಸರಕಾರಿ ಶಾಲೆಯ ಕಟ್ಟಡ ಕುಸಿಯುತ್ತಿದ್ದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
92ವರ್ಷಗಳನ್ನು ಪೂರೈಸಿದ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕುಳಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ಶತಮಾನದತ್ತ ದಾಪುಗಾಲು ಹಾಕುತ್ತಿದೆ. ಆದರೆ ಕುಸಿಯುವ ಹಂತದಲ್ಲಿರುವ ನಾಲ್ಕು ಕೊಠಡಿಗಳನ್ನು ತೆರವುಗೊಳಿಸಿ ಆರು ಹೊಸ ಕೊಠಡಿಗಳನ್ನು ನೀಡುವಂತೆ ಶಿಕ್ಷಣ ಇಲಾಖೆಗೆ , ಶಾಸಕರಿಗೆ 2019ರಿಂದ ಮನವಿ ನೀಡುತ್ತಿದ್ದರೂ ಈವರೆಗೂ ಪ್ರಯೋಜನವಾಗಿಲ್ಲ. ಅಪಾಯದ ಮುನ್ಸೂಚನೆ ಅರಿತ ಶಾಲಾ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ. ಸಮಿತಿಯವರು ಮೂರು ದಿನಗಳ ಹಿಂದಷ್ಟೇ ನಲಿಕಲಿ ತರಗತಿಯ ಪುಟಾಣಿಗಳನ್ನು ಬೇರೊಂದು ಕ್ಲಾಸಿಗೆ ವರ್ಗಾಯಿಸಿದ್ದರು. ಪುಟಾಣಿಗಳ ಅದೃಷ್ಟವೋ ಎಂಬAತೆ ಶುಕ್ರವಾರ ರಾತ್ರಿ ಕೊಠಡಿಯ ಮೇಲ್ಛಾವಣಿ ಕುಸಿದು ನೆಲಕಚ್ಚಿದ್ದು ಇನ್ನಷ್ಟು ಕುಸಿಯುವ ಸ್ಥಿತಿಯಲ್ಲಿದೆ. ಈ ಬಗ್ಗೆ ಮಾಧ್ಯಮ ಜೊತೆ ಎಸ್‌ಡಿಎಮ್‌ಸಿ ಆಧ್ಯಕ್ರ ಶರೀಫ್ ಕುಳಾಲು ಹೊಸಮನೆ ಮಾತನಾಡುತ್ತಾ, ಕುಸಿದು ಬೀಳುವ ಹಂತದಲ್ಲಿರುವ ಕಟ್ಟಡಗಳ ದುರಸ್ತಿಗೊಳಿಸುವಂತೆ 2019ರಲ್ಲೇ ಬಂಟ್ವಾಳ ಶಿಕ್ಷಣ ಇಲಾಖೆಗೆ, ಸ್ಥಳೀಯ ಶಾಸಕರಿಗೆಪದೇ ಪದೇ ಮನವಿ ನೀಡಿದ್ದೇವೆ. ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಮೂರು ವರ್ಷಗಳಿಂದ ಕಟ್ಟಡದ ಮೇಲ್ಛಾವಣಿ ಕುಸಿಯುವ ಹಂತದಲ್ಲಿದೆ ಎಂದು ಮನವಿ ನೀಡುತ್ತಿದ್ದರೂ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಇದೀಗ ಮೂರು ತರಗತಿಗಳು ನಡೆಯುತ್ತಿದ್ದ ಕಟ್ಟಡದ ಮೇಲ್ಛಾವಣಿ ಶುಕ್ರವಾರ ರಾತ್ರಿ ಕುಸಿದು ಬಿದ್ದಿದೆ. ಹಗಲು ಹೊತ್ತಲ್ಲಿ ದುರಂತ ನಡೆಯುತ್ತಿದ್ದರೆ ಪುಟಾಣಿಗಳ ಅವಸ್ಥೆ ಹೇಳತೀರದಾಗುತ್ತಿತ್ತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ತಕ್ಷಣವೇ ಸರಕಾರದ ಆಡಳಿತ ಯಂತ್ರ ಎಚ್ಚೆತ್ತುಕೊಂಡು ಆರು ಕೊಠಡಿಗಳನ್ನು ನೀಡುವ ಮೂಲಕ ಶತಮಾದತ್ತ ಹೆಜ್ಜೆಹಾಕುತ್ತಿರುವ ಕುಳಾಲು ಸರಕಾರಿ ಶಾಲೆಯನ್ನು ಉಳಿಸಬೇಕಾಗಿದೆ.