ಕೇರಳದಲ್ಲಿ ರೈಲಿನಿಂದ ಬಿದ್ದು ವಿಟ್ಲದ ಯುವಕ ಮೃತ್ಯು
ವಿಟ್ಲ: ಕೇರಳದಲ್ಲಿ ನಡೆದ ರೈಲು ಅಪಘಾತದಲ್ಲಿ ವಿಟ್ಲ ಸಮೀಪದ ಕಡಂಬು ಎಂಬಲ್ಲಿಯ ಯುವಕ ಮೃತಪಟ್ಟಿದ್ದಾರೆ.ವಿಟ್ಲ ಸಮೀಪದ ಕಡಂಬು ನಿವಾಸಿ ಪಿಲಿವಲಚ್ಚಿಲ್ ನಿವಾಸಿ ಅಶ್ರಫ್ ಉಸ್ಮಾನ್ ಅವರ ಪುತ್ರ ಮಹಮ್ಮದ್ ಅನಾಸ್(19) ಮೃತಪಟ್ಟ ಯುವಕ. ಈತ ಎಸಿ ಮೆಕಾನಿಕ್ ಆಗಿದ್ದು, ಎಸಿ ಟ್ರೈನಿಂಗ್ ಗಾಗಿ ಕೇರಳದ ಕೊಚ್ಚಿಗೆ ತೆರಳಿದ್ದರು. ತನ್ನ ಕೆಲಸ ಕಾರ್ಯ ಮುಗಿಸಿ, ಊರಿಗೆ ಟೈನ್ ನಲ್ಲಿ ಹಿಂತಿರುಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊರಗಡೆ ಎಸೆಯಲ್ಪಟ್ಟು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.