ಚುನಾವಣೆ ಗೆದ್ದ ಬಳಿಕ ಪ್ರತಿಯೊಂದು ನಡೆಯಲ್ಲೂ ಹೆಚ್ಚಿದ ಜವಾಬ್ದಾರಿ : ಶಾಸಕ ಅಶೋಕ್ ಕುಮಾರ್ ರೈ

ವಿಟ್ಲ: ಕಾರ್ಯಕರ್ತರು ಮಾಡಿದ ಕೆಲಸಕ್ಕೆ ಹೃದಯದಲ್ಲಿ ಜಾಗವನ್ನು ನೀಡಲಾಗಿದೆ. ಜನರ ಮನಸ್ಸಿನಲ್ಲಿ ಹಲವು ನಿರೀಕ್ಷೆಗಳಿದ್ದು, ಚುನಾವಣೆಯಲ್ಲಿ ಗೆದ್ದ ಬಳಿಕ ಪ್ರತಿಯೊಂದು ನಡೆಯಲ್ಲೂ ಜವಾಬ್ದಾರಿ ಹೆಚ್ಚಿದೆ. ಭ್ರಷ್ಟಾಚಾರ ಮುಕ್ತ ಮಾಡುವ ಕಾರ್ಯಕ್ಕೆ ಕೈಹಾಕಿದ್ದು, ಯಾರೊಬ್ಬರೂ ಹಣ ನೀಡುವ ಅಗತ್ಯವಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಮಂಗಳವಾರ ವಿಟ್ಲ ಚರ್ಚ್ ಸಮೀಪದ ಶತಮಾನೋತ್ಸವ ಸಮುದಾಯ ಭವನದಲ್ಲಿ ವಿಟ್ಲ – ಉಪ್ಪಿನಂಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಹಾಗೂ ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ ನಡೆದ ಕೃತಜ್ಞತಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ ಉತ್ತಮ ವ್ಯಕ್ತಿತ್ವ ಇರುವ ವ್ಯಕ್ತಿ ಪಕ್ಷಕ್ಕೆ ಲಭಿಸಿದ್ದಾರೆ. ಕರಾವಳಿಯ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ಅಶೋಕ್ ರೈ ಮಾಡಲಿದ್ದಾರೆ. ಜನರ ಎಲ್ಲ ಬೇಡಿಕೆಯನ್ನು ಪೂರೈಸಿ ಐದು ವರ್ಷದಲ್ಲಿ ದೊಡ್ಡ ಮಟ್ಟದ ಅಭಿನಂದನೆಯನ್ನು ಪಡೆಯುವಂತಾಗಲಿ ಎಂದು ತಿಳಿಸಿದರು.

ಅಭಿನಂದನಾ ಭಾಷಣವನ್ನು ವಿಟ್ಲ ಉಪ್ಪಿನಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ ಕೆ. ಬಿ. ಮಾತನಾಡಿ ಜಾತ್ಯತೀತ ಮನಸ್ಸುಗಳು ಸೋತು ಹೋದ ದಿನದಲ್ಲಿ ಆಶೋಕ್ ರೈ ಗೆಲುವು ಸಾಧಿಸುವ ಮೂಲಕ ಮತ್ತೆ ಜನರಿಗೆ ಆಶಾಕಿರಣ ಮೂಡಿಸಿದೆ. ಜನರ ಕಷ್ಟಗಳ ಬಗ್ಗೆ ನಿರಂತರ ಕೆಲಸ ಮಾಡಿದ ಶಾಸಕರು ಈಗ ಕ್ಷೇತ್ರದ ಕೆಲಸ ಮಾಡುವಂತಾಗಿದೆ ಎಂದು ತಿಳಿಸಿದರು.

ವಿಟ್ಲ – ಉಪ್ಪಿನಂಡಿ ಬ್ಲಾಕ್ ಕಾಂಗ್ರೆಸ್, ವಿಟ್ಲ ನಗರ ಕಾಂಗ್ರೆಸ್ ಸೇರಿ ವಿವಿಧ ಗ್ರಾಮ ಸಮಿತಿಗಳ ವತಿಯಿಂದ ಅಭಿನಂದನೆ ನಡೆಯಿತು.

ಕೆಪಿಸಿಸಿ ಸದಸ್ಯ ಎಂ. ಎಸ್. ಮಹಮ್ಮದ್, ಕಾವು ಹೇಮನಾಥ ಶೆಟ್ಟಿ, ಡಿಸಿಸಿ ಪ್ರಾಧನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ಜೋಕಿಮ್ ಡಿಸೋಜ, ನಝೀರ್ ಮಠ, ಉಮಾನಾಥ ಶೆಟ್ಟಿ, ನೂರುದ್ದೀನ್ ಸಾಲ್ಮರ, ಫಾರೂಕ್ ಪೆರ್ನೆ, ಪದ್ಮನಾಭ ಪೂಜಾರಿ ಸಣ್ಣಗುತ್ತು, ಮಹೇಶ್ ರೈ, ಶ್ರೀನಿವಾಸ ಶೆಟ್ಟಿ ಕೊಲ್ಯ, ಪಟ್ಟಣ ಪಂಚಾಯಿತಿ ಸದಸ್ಯರಾದ ಅಬ್ದುಲ್ ರಹಿಮಾನ ನೆಲ್ಲಿಗುಡ್ಡೆ, ಡೀಕಯ್ಯ, ಪದ್ಮಿನಿ, ಲತಾ ಅಶೋಕ್, ಎ ಮೋಹನ ಗುರ್ಜಿನಡ್ಕ, ರಾಮಣ್ಣ ಪಿಲಿಂಜ, ಜಯಪ್ರಕಾಶ್ ಬದಿನಾರು, ಸಾಹಿರಾ ಬಾನು, ನೆಬಿಸ್ಸಾ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಗ್ರಾಮ ಹಾಗೂ ಪಟ್ಟಣ ಪಂಚಾಯಿತಿಯ ಸದಸ್ಯರು ಉಪಸ್ಥಿತರಿದ್ದರು.

ವಿ.ಕೆ.ಎಂ. ಅಶ್ರಫ್ ಸ್ವಾಗತಿಸಿದರು. ರಮಾನಾಥ ವಿಟ್ಲ ವಂದಿಸಿದರು. ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಜಗನ್ನಾಥ ಶೆಟ್ಟಿ ಕೋಡಿಂಬಾಡಿ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.