ವಿಶ್ವ ಪರಿಸರ ದಿನ ಜೂನ್ 5 ಕ್ಕೆ ಮಾತ್ರ ಸೀಮಿತವಾಗದಿರಲಿ

1972 ರಲ್ಲಿ ವಿಶ್ವಸಂಸ್ಥೆಯ ಮಾನವ ಪರಿಸರದ ಸ್ಟಾಕ್ ಹೋಮ್ ಸಮ್ಮೇಳನದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸುವುದಾಗಿ ಘೋಷಣೆ ಮಾಡಲಾಗಿತ್ತು. ಆದ್ದರಿಂದ ಯುಎನ್ಇಪಿ ನೇತೃತ್ವದಲ್ಲಿ ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಇಂದಿನ ಜಾಗತೀಕರಣದಿಂದಾಗಿ ಪ್ರಕೃತಿಮಾತೆಯ ಒಡಲನ್ನು ಬಗೆಯಲಾಗುತ್ತಿದೆ, ಬಣ್ಣ ಬಣ್ನದ ಸಿಮೆಂಟ್ ಕಟ್ಟಡಗಳ ನಡುವೆ ಪ್ರಕೃತಿಯ ಹಸಿರು ಕಾಣೆಯಾಗುತ್ತಿದೆ,ಮಾಲಿನ್ಯವು ಭೂಮಂಡಲದ ವಿನಾಶಕ್ಕೆ ಅಡಿಗಲ್ಲು ಹಾಕುತ್ತಿದೆ, ಇಷ್ಟೇಲ್ಲ ಕಣ್ಣಮುಂದೆ ನಡೆಯುತಿದ್ದರು ಮನುಷ್ಯ ಮಾತ್ರ ಪರಿಸರ ರಕ್ಷಣೆಯ ಕಡೆಗೆ ಗಮನಹರಿಸದಿರುವುದು ವಿಶಾದನೀಯ ಸಂಗತಿ, ಹಿಂದೆ ಒಂದು ಕಾಲವಿತ್ತು ಏಪ್ರಿಲ್ ಮೇ ತಿಂಗಳಲ್ಲೆ ವರ್ಷಾಧಾರೆಯು ಭೂಮಾತೆಯನ್ನು ಚುಂಬಿಸುತ್ತಿತ್ತು ಆದರೆ ಇವತ್ತಿನ ದಿನದಲ್ಲಿ ಜೂನ್ ತಿಂಗಳು ಆರಂಭವಾದರು ಮಳೆರಾಯ ಇಳೆಯನ್ನು ತಲುಪುವ ಮನಸ್ಸು ಮಾಡುತ್ತಿಲ್ಲ.

ಕೈಗಾರೀಕರಣ, ಡಾಮರೀಕರಣ ಎಂದು ಮರಗಳ ವಿನಾಶ ಮಾತ್ರ ನಡೆಯುತ್ತಿದೇಯೆ ವಿನಹಃ ಗಿಡಮರಗಳ ರಕ್ಷಣೆಯ ಹೊಣೆ ಹೊತ್ತವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.
ಇಂದು ಜೂನ್ 05 ವಿಶ್ವ ಪರಿಸರ ದಿನಾಚರಣೆ, ಅಂದ ಮಾತ್ರಕ್ಕೆ ಗಿಡಮರಗಳನ್ನು ನೆಟ್ಟು ಜಾಲಾತಾಣಗಳಲ್ಲಿ ಸ್ಟೋರಿ, ಸ್ಟೇಟಸ್ ಗಳಿಗೆ ಮಾತ್ರ ಸೀಮಿತವಾಗಬಾರದು, ಜಾಗತೀಕರಣದೊಂದಿಗೆ ಪ್ರಕೃತಿಯನ್ನು ಉಳಿಸಲೂ ಪ್ರತಿಯೊಬ್ಬರು ಪಣ ತೊಡಬೇಕು.

ಮುಂದಿನ ಪೀಳಿಗೆಯು ಕಾಡನ್ನು ವೀಡಿಯೋ ಸಿನೆಮಾದಲ್ಲಿ ನೋಡುವಂತ ಕಾಲಕ್ಕೆ ಅವಕಾಶ ಕೊಡದೆ ಇರೋಣ ಸಾದ್ಯವಾದಷ್ಟು ನಾವೂ ಪ್ರಕೃತಿ ಮಾತೆಯ ಉಳಿವಿಗೆ ಶ್ರಮಿಸೋಣ, ಮಗಿಡಗಳನ್ನು ಬೆಳೆಸೋಣ.

Related Posts

Leave a Reply

Your email address will not be published.