ಯಕ್ಷ ಧ್ರುವ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಉದ್ಘಾಟನೆ
ದೇರಳಕಟ್ಟೆ: ಯಕ್ಷಧ್ರುವ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಉದ್ಘಾಟನಾ ಸಮಾರಂಭ ದೇರಳಕಟ್ಟೆಯ ಕಂಫರ್ಟ್ ಆಫ್ ಹೋಟೆಲ್‍ನ ನೆಲಮಹಡಿಯಲ್ಲಿ ನಡೆಯಿತು.ಮುಂಬಯಿಯ ಹೇರಂಭಾ ಇಂಡಸ್ಟೀಸ್ ಲಿ. ಮತ್ತು ಕೆಮಿನೋ ಫಾರ್ಮಾ ಅಧ್ಯಕ್ಷ
ಕನ್ಯಾನ ಸದಾಶಿವ ಶೆಟ್ಟಿ ನೂತನ ಸೊಸೈಟಿಯನ್ನು ಉದ್ಘಾಟಿಸಿದರು.ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ ಸಂಪತ್ತಿನ ಗಳಿಕೆ, ಬಳಕೆ ಹಾಗೂ ಉಳಿಕೆಧರ್ಮಯುಕ್ತವಾಗಿ ಮಾಡಬೇಕು. ಒಂದು ಕೈಗೆ ಮತ್ತೊಂದು ಕೈ ಸೇರಿದರೆ ಬಲ ಬರುತ್ತದೆ. ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯ ಬಲಿಷ್ಠ ನಿರ್ದೇಶಕ ಮಂಡಳಿ ಹೊಂದಿರುವ ಸೊಸೈಟಿ ಆರಂಭದ ಮೂಲಕ ಬಹಳಷ್ಟು ಜನರಿಗೆ ಸಹಾಯವಾಗಲಿದ್ದು ಯಶಸ್ಸಿನ ಕೀರ್ತಿ ಸಂಪಾದಿಸಲಿ ಎಂದು ನುಡಿದರು.
ಶಾಸಕ ಯು.ಟಿ ಖಾದರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಎಸ್ ಸಿಡಿಸಿಸಿ ಬ್ಯಾಂಕ್‍ನ ನಿರ್ದೇಶಕ ಟಿ.ಜಿ ರಾಜಾರಾಮ್ ಭಟ್ ಗಣಕ ಯಂತ್ರ ಹಾಗೂ ಐಕಳ ಹರೀಶ್ ಶೆಟ್ಟಿ ಭದ್ರತಾ ಕೊಠಡಿ ಉದ್ಘಾಟಿಸಿದರು.ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಷೇರು ಸರ್ಟೀಫಿಕೇಟ್ ಬಿಡುಗಡೆಗೊಳಿಸಿದರು. ದಿನೇಶ್ ಕೋಡಪದವು ಪ್ರಥಮ ಷೇರ್ ಸರ್ಟಿಫಿಕೇಟ್ ಪಡೆದರು.ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಹಿರಿಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ ಉಳಿತಾಯ ಖಾತೆ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಪ್ರಥಮ ಖಾತೆಯನ್ನು ನವೀನ್ ಕುತ್ತಾರು ಪಡೆದುಕೊಂಡರು.ಯಕ್ಷಧ್ರುವ ನಗದು ಪತ್ರವನ್ನು ಉದ್ಯಮಿ ಚಂದ್ರಹಾಸ್ ಶೆಟ್ಟಿ ಬಿಡುಗಡೆಗೊಳಿಸಿದರು.ಮಾಸಿಕ ಠೇವಣಿ ಖಾತೆ ಪುಸ್ತಕವನ್ನು ದಿ ಕಂಫಟ್9 ಇನ್ ಹೋಟೆಲ್ ಮಾಲಕ ಚಂದ್ರಹಾಸ ಶೆಟ್ಟಿ ಸವಣೂರು ಸೀತಾರಾಮ ರೈ ಅವರಿಂದ ಪಡೆದುಕೊಂಡರು.ನಿರಖು ಠೇವಣಿ ಪತ್ರವನ್ನು ಆರತಿ ಆಳ್ವ ಸಂಘದ ನಿರ್ದೇಶಕ ರವಿರಾಜ್ ಶೆಟ್ಟಿ ನಿಟ್ಟೆಗುತ್ತು ಅವರಿಂದ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಪಟ್ಲಗುತ್ತು ಮಹಾಬಲ ಶೆಟ್ಟಿ, ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಸತ್ತಾರ್, ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಕಟೀಲು ತಾಯಿ ಕೊಟ್ಟ ದೊಡ್ಡ ಸಂಪತ್ತು ಕನ್ಯಾನ ಸದಾಶಿವ ಶೆಟ್ಟಿಯವರು. ಸಾವಿರಾರು ಜನರ ಮನಸ್ಸು ಸಂತೃಪ್ತಿಗೊಳಿಸುವ ಪುಣ್ಯ ಸಿಕ್ಕಿದೆ. ಶ್ರೀದೇವಿಯನ್ನು ಹಾಡಿನ ಮೂಲಕ ಕುಣಿಸಿ ಸ್ತುತಿಸುವ ಕೋಟಿಗೊಬ್ಬರಲ್ಲಿ ಯೋಗ ನನ್ನದು. ಯಾವುದೇ ಜೀವಿಗೂ ನೋವು ಕೊಡುವ ಹಕ್ಕು ನಮಗಿಲ್ಲ. ಈ ಸೊಸೈಟಿಯ ಮೂಲಕ ಎಲ್ಲ ಕಲಾವಲಯದ ಸದಸ್ಯರಿಗೆ ಲಾಭ ಹಂಚುವ ಗುರಿ ಇಟ್ಟುಕೊಂಡಿದ್ದೇವೆ.
ಪ್ರವರ್ತಕರಾದ ಐಕಳ ಹರೀಶ್ ಶೆಟ್ಟಿ, ಸವಣೂರು ಸೀತಾರಾಮ ರೈ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಪಟ್ಲ ಸತೀಶ್ ಶೆಟ್ಟಿ, ಸುಧಾಕರ ಪೂಂಜ, ಸಂತೋಷ್ ಕುಮಾರ್ ಶೆಟ್ಟಿ, ಪುರುಷೋತ್ತಮ ಭಂಡಾರಿ, ಗಿರೀಶ್ ಶೆಟ್ಟಿ, ರವಿಚಂದ್ರ ಶೆಟ್ಟಿ, ಲೋಕೇಶ್ ಪೂಜಾರಿ, ಆರತಿ ಆಳ್ವ ಹಾಗೂ ಪ್ರಭಾರ ಪ್ರಧಾನ ವ್ಯವಸ್ಥಾಪಕಿ ತನುಜಾ ಜೆ. ಅಡ್ಯಂತ್ತಾಯ, ಸೊಸೈಟಿ ನಿರ್ದೇಶಕ ಸವಣೂರು ಸೀತಾರಾಮ ರೈ, ನಿರ್ದೇಶಕ ಪುರುಷೋತ್ತಮ ಭಂಡಾರಿ ಉಪಸ್ಥಿತರಿದ್ದರು.
ಸೊಸೈಟಿ ಕಚೇರಿಯ ಒಳ ವಿನ್ಯಾಸಕಾರ ಪ್ರದೀಪ್ ಆಳ್ವ ಅವರನ್ನು ಸನ್ಮಾನಿಸಲಾಯಿತು.