ಯಮಹಾ ರೆವ್‍ಸ್ಟಾರ್ ಎಲೆಕ್ಟ್ರಿಕ್ ಗಿಟಾರ್ ಮಂಗಳೂರಿನಲ್ಲಿ ಬಿಡುಗಡೆ

ಕದ್ರಿ ಕಂಬಳದ ವ್ಯಾಸ ರಾವ್ ರಸ್ತೆ ಸಮೀಪದಲ್ಲಿರುವ ಮ್ಯೂಸಿಕ್ ಸ್ಕ್ವೇರ್ ಮಂಗಳೂರಿನ ಕದ್ರಿ ಕಂಬಳದ ವ್ಯಾಸ ರಾವ್ ರಸ್ತೆ ಸಮೀಪದಲ್ಲಿರುವ ಯಮಹಾ ಮ್ಯೂಸಿಕ್ ಸ್ಕ್ವೇರ್‍ನಲ್ಲಿ ಹೊಚ್ಚ ಹೊಸ ಶ್ರೇಣಿಯ ಯಮಹಾ ರೆವ್‍ಸ್ಟಾರ್ ಎಲೆಕ್ಟ್ರಿಕ್ ಗಿಟಾರ್‍ನ್ನು ಮಂಗಳೂರು ಮಾರುಕಟ್ಟೆಗೆ ಬಿಡುಗಡೆಗೊಂಡಿತ್ತು. ಯಮಹಾ ಮ್ಯೂಸಿಕ್ ಸ್ಕ್ವೇರ್ ಇನ್ಸ್‍ಸ್ಟ್ರುಮೆಂಟ್ಸ್ ನ ಪ್ರಮುಖ ಕಚೇರಿಯಲ್ಲಿ ಮಂಗಳೂರಲ್ಲೂ ತನ್ನ ಶೋರೂಂಗಳನ್ನು ಹೊಂದಿದ್ದು, ಇದೀಗ ಮಂಗಳೂರಿನ ಕದ್ರಿ ಕಂಬಳದ ವ್ಯಾಸ ರಾವ್ ರಸ್ತೆ ಸಮೀಪದಲ್ಲಿರುವ ಯಮಹಾ ಮ್ಯೂಸಿಕ್ ಸ್ಕ್ವೇರ್‍ನಲ್ಲಿ ಹೊಚ್ಚ ಹೊಸ ಶ್ರೇಣಿಯ ಯಮಹಾ ರೆವ್‍ಸ್ಟಾರ್ ಎಲೆಕ್ಟ್ರಿಕ್ ಗಿಟಾರ್ ಪರಿಚಯಿಸಿದೆ.ಇದರ ಉದ್ಘಾಟನಾ ಸಮಾರಂಭ ಜರುಗಿತ್ತು.

ಅತಿಥಿ ಗಣ್ಯರು ಮಾರುಕಟ್ಟೆಗೆ ಲೋಕರ್ಪಣೆಗೊಳಿಸಿದರು. ಯಮಹಾ ಗಿಟಾರ್ ತಜ್ಞ ಹಾಗೂ ಸಂಗೀತ ನಿರ್ಮಾಪಕ ರಿಪ್ಪಲ್ ಬೋರುವ ಅವರು ಯಮಹಾ ರೆವ್‍ಸ್ಟಾರ್ ಎಲೆಕ್ಟ್ರಿಕ್ ಗಿಟಾರ್ ಬಗ್ಗೆ ಮಾಹಿತಿ ನೀಡಿದ್ರು. ಜೊತೆಗೆ ಹೊಸ ಗಿರಾಟ್‍ನ್ನು ವಾದಕ ಮಾಡುವ ಮೂಲಕ ಸಂಭ್ರಮಿಸಿದರು. ಯಮಹಾ ಗಿಟಾರ್ ತಜ್ಞ ಹಾಗೂ ವಾದಕ ಸಂಗೀತಗಾರ ಪ್ಯಾಟ್ರಿಕ್ ಪೆರೇರಾ ಅವರು ಗಿರಾಟ್ ಮೂಲಕ ವಾದಕ ನಡೆಸಿಕೊಟ್ಟರು ಸ್ಟೋರ್ ಮ್ಯಾನೇಜರ್ ಪ್ರೇಮ್ ಅವರು ಕಾರ್ಯಕ್ರಮವನ್ನ ನಡೆಸಿಕೊಟ್ಟರು. ಈ ವೇಳೆ ಯಮಹಾ ಮ್ಯೂಸಿಕ್ ಸ್ಕ್ಟೇರ್ ಮಾಲೀಕ ಸಚಿನ್ ದೇವ್ ರೈ, ಸಿಬ್ಬಂದಿಗಳಾದ ಅಮಿತ್, ಸ್ಟೀವನ್, ತರಬೇತುದಾರ ಜೋಸೆಫ್ ಮತ್ತಿತರರು ಉಪಸ್ಥಿತರಿದ್ದರು. ಮ್ಯೂಸಿಕ್ ಸ್ಕ್ಟೇರ್‍ನಲ್ಲಿ ಸಂಗೀತ ಉತ್ಸಾಹಿಗಳಿಗೆ ಕೀಬೋರ್ಡ್‍ಗಳು, ಡಿಜಿಟಲ್ ಪಿಯಾನೋಗಳು, ಗಿಟಾರ್ ಪರಿಕರಗಳು ಮತ್ತು ಗಿಟಾರ್ ಆಂಪ್ಲಿಪೈಯರ್‍ಗಳು, ಸ್ಟ್ರಿಂಗ್‍ಗಳು, ಸ್ಟ್ರಾಪ್‍ಗಳು, ಪಿಕ್ಸ್, ಟ್ಯೂನರ್‍ಗಳು, ಡ್ರಮ್ ಸ್ಟಿಕ್‍ಗಳು ಇಲ್ಲಿ ಲಭ್ಯವಿದೆ. ಜೊತೆಗೆ ಸಂಗೀತ ಆಸಕ್ತರಿಗಾಗಿ ನುರಿತ ತರಭೇತುದಾರರಿಂದ ತರಭೇತಿಯನ್ನ ಇಲ್ಲಿ ನೀಡಲಾಗುತ್ತದೆ.