ಯಡ್ತೆರೆ ಮಂಜಯ್ಯ ಶೆಟ್ಟರ ಕನಸಿನ ಕೂಸು ನೆಂಪು ಪಬ್ಲಿಕ್ ಸ್ಕೂಲ್ :ವಜ್ರ ಸಂಗಮದ ಉದ್ಘಾಟನಾ ಕಾರ್ಯಕ್ರಮ
ಬೈಂದೂರು: ಗ್ರಾಮೀಣ ಭಾಗಗಳ ಅಭಿವೃದ್ಧಿಯ ಬಗ್ಗೆ ಕನಸು ಕನಸು ಕಂಡು ನನಸು ಮಾಡಲು ಹೊರಟಿದ್ದ ಯಡ್ತೆರೆ ಮಂಜುಯ್ಯ ಶೆಟ್ಟಿ ಕರಾವಳಿಯ ಧೀಮಂತ ನಾಯಕ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.ವಂಡ್ಸೆ ಸಮೀಪದ ನೆಂಪುವಿನ ಮಲ್ನಾಡ್ ಸ್ಲೂಲ್, ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ವಜ್ರ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಂಡ್ಸೆ ಪಿರ್ಕಾ ಎನ್ನುವುದು ಉಡುಪಿ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಪಿರ್ಕಾ ಆಗಿದೆ. ನಿಜವಾಗಿ ವಂಡ್ಸೆ ಪಿರ್ಕಾ ತಾಲೂಕಾಗಬೇಕಿತ್ತು ಎಂದ ಅವರು, ನೆಂಪು ಪದವಿ ಪೂರ್ವ ಕಾಲೇಜಿನ ಮಕ್ಕಳಿಗೆ ಮಧ್ಯಾಹ್ನದ ಉಚಿತ ಊಟ ನೀಡುವುದಾಗಿ ಭರವಸೆ ನೀಡಿದರು. ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ನನ್ನ ಕ್ಷೇತ್ರದ ಎಲ್ಲಾ ಜನರೊಂದಿಗೆ ತಾನಿರುವುದಾಗಿ ಭರವಸೆ ನೀಡಿದರು.
ಸಭೆಗೆ ಮುನ್ನ ಸ್ವಾಗತ ಕಮಾನು ಹಾಗೂ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಯಿತು. ಈ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭೆಗಳಿಗೆ ಹಾಗೂ ದಾನಿಗಳಿಗೆ ಸನ್ಮಾನ ಮಾಡಲಾಯಿತು. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಕೆ. ನಾರಾಯಣ ಶೆಟ್ಟಿ, ಕೆಂಚನೂರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಡಿ.ಸಿ.ಏಫ್ ರಾಜಗೋಪಾಲ ಶೆಟ್ಟಿ ಕೂಕನಾಡು, ಕರ್ನಾಟಕ ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಬಿ.ಎನ್.ಶೆಟ್ಟಿ ಬಗವಾಡಿ, ಕೇರಳದ ನಿವೃತ್ತ ಪಿ.ಸಿ.ಎಫ್ ನಾಗೇಶ್ ಪ್ರಭು ಚಿತ್ತೂರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುಸ್ಕೃತ ಉದ್ಯಮಿ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಎನ್. ಆನಂದ ಶೆಟ್ಟಿ ಸಬ್ಲಾಡಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶ್ತಿ ವಿಜೇತ ಶಾಂತರಾಮ ಶೆಟ್ಟಿ ಸಿ.ಎ., ಉದ್ಯಮಿ ಗೋವಿಂದ ಬಾಬು ಪೂಜಾರಿ, ಪ್ರಾಂಶುಪಾಲ ರಾಜೂವ ನಾಯ್ಕ್, ಪ್ರೌಢಶಾಲಾ ಮುಖ್ಯೋಪಾದ್ಯಾಯ ಸದಾನಂದ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯ ಕುಪ್ಪಯ್ಯ ಮರಾಠಿ, ನಿವೃತ್ತ ಉಪನ್ಯಾಸಕ ತೋಟಬೈಲು ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಸ್ವಾಗತಿಸಿ, ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ವಂದಿಸಿದರು. ಬಳಿಕ ಮಿರಾಕಲ್ ಡಾನ್ಸ್ ಅಕಾಡೆಮಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.