ಎಣ್ಮೂರು ಕೋಟಿ ದರ್ಶನ ಪಾತ್ರಿ ಗಿರೀಶ್ ಕುಟುಂಬಕ್ಕೆ ಧನ ಸಹಾಯದ ಚೆಕ್ ವಿತರಣೆ
ಎಣ್ಮೂರು ಬೈದರ್ಕಳ ಗರಡಿಯ ಕೋಟಿ ದರ್ಶನ ಪಾತ್ರಿ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ನೇಲ್ಯಕುಮೇರ್ ಬಾಬು ಪೂಜಾರಿ ಅವರ ಪುತ್ರ ಗಿರೀಶ್ ಮೃತಪಟ್ಟಿದ್ದು, ಮೃತರ ಮನೆಗೆ ಮುಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಳ ಅಧ್ಯಕ್ಷರಾದ ರಾಜಶೇಖರ್ ಕೋಟ್ಯಾನ್, ಉಪಾಧ್ಯಕ್ಷ ಹರೀಶ್ ಡಿ ಸಾಲಿಯಾನ್,ಕಾರ್ಯದರ್ಶಿ ಗಂಗಾಧರ ಪೂಜಾರಿ ಚೆಳ್ಯಾರ್ , ಜತೆ ಕಾರ್ಯದರ್ಶಿ ಗಣೇಶ್ ಪೂಜಾರಿ ಮೂಡು ಪೆರರ,ಪದಾಧಿಕಾರಿಗಳಾದ ಕುಮಾರ್ ಪೂಜಾರಿ ಇರುವೈಲ್, ದಾಮೋದರ ಪೂಜಾರಿ ಸಿದ್ದಕಟ್ಟೆ, ಸಿದ್ದಕಟ್ಟೇ ಬಿಲ್ಲವ ಸಂಘದ ಅಧ್ಯಕ್ಷ ದಿನೇಶ್ ಸುಂದರ್ ಶಾಂತಿ,ಗೌರವ ಅಧ್ಯಕ್ಷರಾದ ಗೋಪಾಲ ಬಂಗೇರ, ಕಾರ್ಯದರ್ಶಿ ಉಮೇಶ್ ಹಿಂಗಣಿ, ಲೋಕೇಶ್ ಕಂಬಲ್ದೋಡಿ, ಪ್ರಮೀಳಾ ಲೋಕೇಶ್ ಭೇಟಿ ನೀಡಿ ಸಾಂತ್ವನ ಹೇಳಿ ಮುಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಳದ ವತಿಯಿಂದ ಮೃತರ ಕುಟುಂಬದ ಆರ್ಥಿಕ ಪರಿಸ್ಥಿತಿ ಮನಗಂಡು ಅವರ ಪತ್ನಿ ಶ್ರೀಮತಿ ತಾರ ಗಿರೀಶ್ ರವರಿಗೆ ಧನ ಸಹಾಯದ ಚೆಕ್ಕನ್ನು ನೀಡಲಾಯಿತು.