ಗಾಯಕ, ಸಮಾಜ ಸೇವಕ ಯುವರಾಜ್ ದೇವಾಡಿಗ ಇನ್ನಿಲ್ಲ

ದುಬೈಯ ಯುವ ಗಾಯಕ, ಸಮಾಜ ಸೇವಕ ಯುವರಾಜ್ ಕೆ ದೇವಾಡಿಗ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಯುವರಾಜ್ ಕೆ ದೇವಾಡಿಗ ಅವರು ಮಂಗಳೂರಿನ ಮಂದಾರಬೈಲ್ ನ ನಿವಾಸಿಯಾಗಿದ್ದು ಶಾರ್ಜದ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 2 ವರ್ಷಗಳ ಹಿಂದೆ ಇವರ ವಿವಾಹವು ಬಿಜೈ ಕಾಪಿಕಾಡಿನ ಪ್ರತಿಮಾ ಎಂಬುವವರ ಜೊತೆ ನಡೆದಿತ್ತು.

ಯೌಟ್ಯೂಬ್ ಮತ್ತು ಫೇಸ್ಬುಕ್‌ನಲ್ಲಿ ಸ್ವರಬ್ರಾಮ್ಹರೀ ಎಂಬ ಚಾನೆಲ್ ಮುಖಾಂತರ ತಮ್ಮ ಹಾಡುಗಾರಿಕೆಯಿಂದ ಹಲವಾರು ಅಭಿಮಾನಿಗಳನ್ನು ಹೊಂದಿದ್ದರು. ದುಬೈ ಕರ್ನಾಟಕ ಸಂಘದ ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿದ್ದ ಇವರು ಯುಎಇ ಯ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಹಲವಾರು ಯುವ ಗಾಯಕ, ಗಾಯಕಿಯರನ್ನು ಪ್ರೋತ್ಸಾಹಿಸುವ ಸಲುವಾಗಿ ಸಂಗೀತ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬಂದಿದ್ದರು. ಹಲವಾರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದೇಣಿಗೆ ನೀಡುತ್ತಿದ್ದರಲ್ಲದೆ, ಪ್ರತಿ ವರ್ಷ ಊರಿನಿಂದ ಕನಿಷ್ಠ ಪಕ್ಷ ಒಬ್ಬ ಯುವಕನನ್ನು ಯುಎಇ ಗೆ ಕರೆತಂದು ಅವರ ಊಟ ಮತ್ತು ವಸತಿಯ ವ್ಯವಸ್ಥೆ ಮಾಡಿ ಅವರಿಗೆ ಉದ್ಯೋಗ ಒದಗಿಸಲು ಸಹಾಯ ಮಾಡುತಿದ್ದರು.
ಇವರ ಪಾರ್ಥಿವ ಶರೀರವು ಮಂಗಳೂರಿನ ಮಂದಾರಬೈಲ್ ನಲ್ಲಿರುವ ಅವರ ಸ್ವಗ್ರಹಕ್ಕೆ ತಲುಪಿದೆ.

Related Posts

Leave a Reply

Your email address will not be published.