ಅನಿಮಲ್ ಪ್ರಿಂಟ್ ಮೂಲಕ ಗಮನ ಸೆಳೆದ ಡಾ, ಜ್ಯೋತಿ ಬೆಹಲ್
ಬೆಂಗಳೂರಿನ ಜನಪ್ರಿಯ ಫ್ಯಾಶನ್ ಡಿಸೈನರ್ ಡಾ.ಜ್ಯೋತಿ ಬೆಹಲ್ ಅವರು ವೈವಿಧ್ಯಮಯ ಫ್ಯಾಶನ್ ಶೂಟ್ಗಳ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚೆಗೆ ಶಿವ ರೂಪಿಣಿಯಾಗಿ ಮಿಂಚಿದ್ದ ಅವರು ಇದೀಗ ಅನಿಮಲ್ ಪ್ರಿಂಟ್ ಮೂಲಕ ಆಕರ್ಷಣೆಯ ಕೇಂದ್ರವಾಗಿದ್ದಾರೆ.
ತಾವೇ ಡಿಸೈನ್ ಮಾಡಿದ ಅನಿಮಲ್ ಪ್ರಿಂಟ್ ಡಿಸೈನರ್ ವೇರ್ ಗೆ ಸ್ವತಾ: ಡಾ.ಜ್ಯೋತಿ ಬೆಹಲ್ ಅವರು ಮೊಡೆಲ್ ಆಗಿ ಪೊಟೋ ಶೂಟ್ ನಲ್ಲಿ ಭಾಗವಹಿಸಿದರು. ಖ್ಯಾತ ಫ್ಯಾಶನ್ ಪೊಟೋಗ್ರಾಫರ್ ಲೀಜು ಮಾಧವನ್ ಅವರ ಪೊಟೋಗ್ರಪಿ ಕೂಡ ಅಧ್ಬುತವಾಗಿ ಮೂಡಿ ಬಂದಿದೆ.