ಉಡುಪಿಯಲ್ಲಿ ಕಾಲು ಕೊಳೆತು ಅಸಹಾಯಕ ಸ್ಥಿತಿಯಲ್ಲಿದ್ದ ಬೀದಿ ಶ್ವಾನದ ರಕ್ಷಣೆ

ಉಡುಪಿ: ಬೀದಿ ಶ್ವಾನವೊಂದು ಕಾಲಿಗೆ ಗಾಯಗೊಳಗಾಗಿ ಕೆಲವು ವರ್ಷಗಳಿಂದ ಉಡುಪಿ ಮಿತ್ರ ಆಸ್ಪತ್ರೆ ಬಳಿ ಅಸಹಾಯಕ ಸ್ಥಿತಿಯಲ್ಲಿ ದಿನಗಳ ಕಳೆಯುತಿತ್ತು. ಶ್ವಾನದ ಅಸಹಾಯಕ ಪರಿಸ್ಥಿತಿ ಕಂಡು ಮರುಗಿದ ಪ್ರಾಣಿ ಪ್ರೀಯರಾದ, ಅನೀಶ್, ಭರತ್, ಸುಮನಾ, ನಿಖಿತಾ ಪೂಜಾರಿ, ಮಂಜುಳ ಕರ್ಕೆರಾ ಅವರು ಶ್ವಾನವನ್ನು ವಶಕ್ಕೆ ಪಡೆದು, ಖಾಸಗಿ ಪಶು ಚಿಕಿತ್ಸಾಲಯದಲ್ಲಿ ಚಿಕಿತ್ಸೆಗೆ ಒಳಪಡಿಸಿದರು. ಆ ಬಳಿಕ ಮಣಿಪಾಲದ ಶ್ವಾನ ಪುರ್ವಸತಿ ಕೇಂದ್ರದಲ್ಲಿ ಆಶ್ರಯ ಒದಗಿಸಿದರು. ಬಬಿತಾ ಮಧ್ವರಾಜ್ ಅವರು ಚಿಕಿತ್ಸಾ ವೆಚ್ಚವನ್ನು ಭರಿಸಿದರು. ಪ್ರಾಣಿಪ್ರಿಯರ ಪ್ರಾಣಿದಯೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ಕಾರ್ಯಚರಣೆಗೆ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು, ಶ್ವಾನ ಸಾಗಿಸಲು ಉಚಿತ ಅಂಬುಲೇನ್ಸ್ ಸೇವೆಯನ್ನು ಒದಗಿಸಿ ನೆರವಾದರು.

 

Related Posts

Leave a Reply

Your email address will not be published.