ಉಡುಪಿಯಲ್ಲಿ ಭಾರೀ ಮಳೆ: ತಗ್ಗು ಪ್ರದೇಶಗಳು ಜಲಾವೃತ
ಉಡುಪಿ: ಉಡುಪಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಎಡೆಬಿಡದೆ ಭಾರೀ ಮಳೆ ಸುರಿಯುತ್ತಿದೆ.ಜಿಲ್ಲೆಯಲ್ಲಿ ಅರೆಂಜ್ ಅಲರ್ಟ್ ಮುಂದುವರೆದಿದ್ದು.ಜೀವ ನದಿಗಳು ತುಂಬಿ ಹರಿಯುತ್ತಿವೆ.
ಉಡುಪಿ ನಗರದ ಮಠದಬೆಟ್ಟು ಪರಿಸರದಲ್ಲಿ ಇಂದ್ರಾಣಿ ನದಿ ತುಂಬಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ.ಭಾರೀ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಕೃಷಿ ಪ್ರದೇಶಗಳು ಭಾಗಶಃ ಮುಳುಗಡೆ ಗೊಂಡಿದ್ದು,ಜನ ಜೀವನ ಅಸ್ತವ್ಯಸ್ತ ಗೊಂಡಿದೆ. ಮಠದ ಬೆಟ್ಟು ಕೊಪ್ಪರ ತೋಟಕ್ಕೆ ಸಂಪರ್ಕಿಸುವ ಕಾಲು ಸೇತುವೆ ಮುರಿದ್ದಿದ್ದು, ತಾತ್ಕಲಿಕವಾಗಿ ಹಾಕಲಾಗಿರುವ ಸೇತುವೆಯೂ ಅಪಾಯದಲ್ಲಿದ್ದು, ಸ್ಥಳೀಯರು ಅತಂಕಕ್ಕೆ ಒಳಗಾಗಿದ್ದಾರೆ.